Home ಸುದ್ದಿಗಳು ಕಾಂತಾರ ಚಿತ್ರ ತಂಡದ ವಾಹನ ಅಪಘಾತ: ವಾಹನದಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯ

ಕಾಂತಾರ ಚಿತ್ರ ತಂಡದ ವಾಹನ ಅಪಘಾತ: ವಾಹನದಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯ

Series of accidents between car, two bikes

ಕೊಲ್ಲೂರು: ಕಾಂತಾರ-1 ಚಿತ್ರ ತಂಡದ ವಾಹನ ಅಪಘಾತ ನಡೆದ ಘಟನೆ ನಡೆದಿದೆ.

ಹಾಲ್ಕಲ್‌ನ ಆನೆಝರಿ ಎನ್ನುವಲ್ಲಿ ಕಾಂತಾರ-1 ಚಿತ್ರ ತಂಡದ ಮಿನಿ ಬಸ್‌ ಗೆ ಸ್ಕೂಟರ್‌ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸುವ ಭರದಲ್ಲಿ ವಾಹನ ರಸ್ತೆ ಪಕ್ಕಕ್ಕೆ ಸರಿದಿದೆ.

ವಾಹನದಲ್ಲಿ ಕಾಂತಾರ-1 ಚಿತ್ರ ತಂಡದ ತಾಂತ್ರಿಕ ವಿಭಾಗದವರು ಮತ್ತು ಸಹಕಲಾವಿದರು ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ.

ಮಿನಿಬಸ್‌ ಚಾಲಕನ ನಿರ್ಲಕ್ಷ್ಯ ಆರೋಪಿಸಿ ಚಾಲಕ ಮತ್ತು ಅದರಲ್ಲಿದ್ದ ಸಹ ಕಲಾವಿದರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

 
Previous articleಕುಖ್ಯಾತ ರೌಡಿಶೀಟರ್‌ ದಾವೂದ್‌ನನ್ನು ಬಂಧಿಸಿದ ಸಿಸಿಬಿ ಪೊಲೀಸರು
Next articleಚಿಕನ್‌ ಸೆಂಟರ್‌ನಲ್ಲಿ ಅಕ್ರಮ ಮದ್ಯ ದಾಸ್ತಾನು: ಓರ್ವನ ವಿರುದ್ಧ ಪ್ರಕರಣ ದಾಖಲು