Home ಸುದ್ದಿಗಳು ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

0
ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಕಾರ್ಕಳ: ಎಂಬಿಎ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಸಬಾ ಗ್ರಾಮದ ಕೆ. ವೆಂಕಟೇಶ ಹೆಗ್ಡೆ (22) ಎಂದು ಗುರುತಿಸಲಾಗಿದೆ.

ಮಂಗಳೂರು ಸೈಂಟ್‌ ಜೋಸೆಫ್‌ ವಿದ್ಯಾಲಯದಲ್ಲಿ ಎಂಬಿಎ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಈತ ನನಗೆ ವಿದ್ಯಾಭ್ಯಾಸದಲ್ಲಿ ಕಷ್ಟವಾಗುತ್ತಿದೆ ಎಂದು ತಂದೆಯಲ್ಲಿ ಹೇಳಿದ್ದನು ಎನ್ನಲಾಗಿದೆ.

ಸುಮಾರು 10 ದಿನಗಳಿಂದ ಮೌನವಾಗಿದ್ದ ವೆಂಕಟೇಶ್, ಮನೆಯ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here