Home ಸುದ್ದಿಗಳು ಶುಲ್ಕ ಪಡೆದು ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ: ವಿದ್ಯಾರ್ಥಿಗಳಿಗೆ ಸಂಕಷ್ಟ

ಶುಲ್ಕ ಪಡೆದು ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ: ವಿದ್ಯಾರ್ಥಿಗಳಿಗೆ ಸಂಕಷ್ಟ

0
ಶುಲ್ಕ ಪಡೆದು ಮುದ್ರಿತ ಪುಸ್ತಕ ನೀಡದ ಕರ್ನಾಟಕ ಮುಕ್ತ ವಿವಿ: ವಿದ್ಯಾರ್ಥಿಗಳಿಗೆ ಸಂಕಷ್ಟ

ಉಡುಪಿ: ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಳೆದ ವರ್ಷ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಮುದ್ರಿತ ಪುಸ್ತಕ ಇನ್ನು ದೊರೆತಿಲ್ಲ ಅದಕ್ಕೆ ಪಡೆದಿದ್ದ ಶುಲ್ಕವನ್ನೂ ಮರಳಿಸಿಲ್ಲ.

ಈಗ 2ನೇ ಸೆಮಿಸ್ಟರ್‌ನ ಇನ್ನೊಂದು ಬ್ಯಾಚ್‌ನ ವಿದ್ಯಾರ್ಥಿಗಳು ಜನವರಿ – ಫೆಬ್ರವರಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅವರಿಗೂ ಮುದ್ರಿತ ಪುಸ್ತಕ ಪ್ರತಿಗಳನ್ನು ತಲುಪಿಸಿಲ್ಲ.

ಮುದ್ರಿತ ಪ್ರತಿ ಸಿಗದವರಿಗೆ ದಾಖಲಾತಿ ಸಂದರ್ಭ ಶೇ.10ರಷ್ಟು ಶುಲ್ಕ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆಯೇ ಹೊರತು ಅಧಿಕೃತ ಆದೇಶ ಪಾದೇಶಿಕ ಕೇಂದ್ರ ಗಳಿಗೆ ತಲುಪಿಲ್ಲ. ಮುದ್ರಿತ ಪ್ರತಿಗೆ ಶುಲ್ಕ ಪಾವತಿಸಿ ಯೂ ಮುದ್ರಿತ ಪ್ರತಿ ತಲುಪದ ಅಥವಾ ಸಿಗದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ದಾಖಲಾತಿ ಸಂದ ರ್ಭದಲ್ಲಿ ಶೇ.10ರಷ್ಟು ರಿಯಾಯಿತಿ ನೀಡುವುದಾಗಿ ವಿವಿ ತಿಳಿಸಿತ್ತು.

ಆದರೆ 2ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮುದ್ರಿತ ಪ್ರತಿ ಇಲ್ಲದೆ ಬರೆದು, ಮೂರನೇ ಸೆಮಿಸ್ಟರ್‌(2ನೇ ವರ್ಷಕ್ಕೆ)ಗೆ ಪ್ರವೇಶ ಪಡೆದಿರುವವರು ಪೂರ್ಣ ಶುಲ್ಕ ಪಾವತಿಸಬೇಕಾಗಿದೆ.

ಈಗಾಗಲೇ ಒಂದು ಬ್ಯಾಚ್‌ನ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪುಸ್ತಕ ಇಲ್ಲದೇ ಆ್ಯಪ್‌ ಮೂಲಕ ಪುಸ್ತಕ ಡೌನ್‌ಲೋಡ್‌ ಮಾಡಿ ಝೆರಾಕ್ಸ್‌ ತೆಗೆದು ಅಧ್ಯಯನ ಮಾಡಿದ್ದಾರೆ. ಪುಸ್ತಕದ ಝೆರಾಕ್ಸ್‌ಗೆ 1,000-1,500 ರೂ.ಗಳನ್ನು ಹೆಚ್ಚುವರಿ ಖರ್ಚು ಮಾಡಿದ್ದಾರೆ.

 

LEAVE A REPLY

Please enter your comment!
Please enter your name here