Home ಸುದ್ದಿಗಳು ಬಿಆರ್ ಅಂಬೇಡ್ಕರ್ ಗೆ ಅವಮಾನ: ಅಮಿತ್ ಶಾ ರಾಜೀನಾಮೆ ನೀಡಲು ಖರ್ಗೆ ಒತ್ತಾಯ

ಬಿಆರ್ ಅಂಬೇಡ್ಕರ್ ಗೆ ಅವಮಾನ: ಅಮಿತ್ ಶಾ ರಾಜೀನಾಮೆ ನೀಡಲು ಖರ್ಗೆ ಒತ್ತಾಯ

0
ಬಿಆರ್ ಅಂಬೇಡ್ಕರ್ ಗೆ ಅವಮಾನ: ಅಮಿತ್ ಶಾ ರಾಜೀನಾಮೆ ನೀಡಲು ಖರ್ಗೆ ಒತ್ತಾಯ

ನವದೆಹಲಿ: ಸಂಸತ್ತಿನಲ್ಲಿ ದಲಿತ ನಾಯಕ ಬಿಆರ್ ಅಂಬೇಡ್ಕರ್ ಅವರನ್ನು ಸಚಿವ ಅಮಿತ್ ಶಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಹಲವು ವಿರೋಧ ಪಕ್ಷದ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಆರ್ ಅಂಬೇಡ್ಕರ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಇಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸಂಸತ್ತಿನಲ್ಲಿ ಅಂಬೇಡ್ಕರ್ ನೀಡಿರುವ ಹೇಳಿಕೆ ಸರಿಯಲ್ಲ. ಅಮಿತ್ ಶಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ನಮ್ಮ ಬೇಡಿಕೆ ಏನೆಂದರೆ ಅಮಿತ್ ಶಾ ಕ್ಷಮೆ ಯಾಚಿಸಬೇಕು ಮತ್ತು ಪ್ರಧಾನಿ ಮೋದಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ನಂಬಿಕೆ ಇದ್ದರೆ ಮಧ್ಯರಾತ್ರಿಯೊಳಗೆ ಅಮಿತ್ ಶಾ ಅವರನ್ನು ವಜಾ ಮಾಡಬೇಕು. ಅವರಿಗೆ ಸಂಪುಟದಲ್ಲಿ ಉಳಿಯುವ ಹಕ್ಕಿಲ್ಲ, ಅವರನ್ನು ವಜಾ ಮಾಡಬೇಕು.

ಆಗ ಮಾತ್ರ ಜನರು ಮೌನವಾಗಿರುತ್ತಾರೆ, ಇಲ್ಲದಿದ್ದರೆ ಜನರು ಪ್ರತಿಭಟಿಸುತ್ತಾರೆ. ಡಾ ಬಿಆರ್ ಅಂಬೇಡ್ಕರ್ ಅವರಿಗಾಗಿ ಜನರು ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here