Home ಸುದ್ದಿಗಳು ಮುಂಬೈ: ಬಾಲಿವುಡ್‌ನ ಹಲವು ನಟ ನಟಿಯರಿಗೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್‌ನ ಹಲವು ನಟ ನಟಿಯರಿಗೆ ಜೀವ ಬೆದರಿಕೆ

0
ಮುಂಬೈ: ಬಾಲಿವುಡ್‌ನ ಹಲವು ನಟ ನಟಿಯರಿಗೆ ಜೀವ ಬೆದರಿಕೆ

ಮುಂಬೈ: ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ಬೆನ್ನಲ್ಲೇ ಬಾಲಿವುಡ್‌ನ ಹಲವು ನಟ ನಟಿಯರಿಗೆ ಜೀವ ಬೆದರಿಕೆ ಬಂದಿದೆ.

ಹಾಸ್ಯನಟ ಕಪಿಲ್ ಶರ್ಮಾ, ನಟ ರಾಜ್‌ಪಾಲ್ ಯಾದವ್, ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಮತ್ತು ಗಾಯಕಿ – ಹಾಸ್ಯ ನಟಿ ಸುಗಂಧ ಮಿಶ್ರಾ ಪಾಕಿಸ್ತಾನ ಮೂಲದ ಇ-ಮೇಲ್‌ನಿಂದ ಜೀವ ಬೆದರಿಕೆ ಬಂದಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸೆಲೆಬ್ರಿಟಿಗಳು ನೀಡಿದ ದೂರಿನ ಮೇರೆಗೆ ಮುಂಬೈನ ಅಂಬೋಲಿ ಮತ್ತು ಓಶಿವಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ನಾವು ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಇದು ಪ್ರಚಾರದ ಸ್ಟಂಟ್‌ ಅಲ್ಲ, ನಿಮಗೆ ಕಿರುಕುಳ ನೀಡುವ ಪ್ರಯತ್ನವೂ ಅಲ್ಲ. ಈ ಸಂದೇಶವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ. ನಾವು ಹೇಳಿದಂತೆ ಕೇಳದಿದ್ದರೆ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರಬಹುದು. 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಅಂತ ಇ-ಮೇಲ್‌ನಲ್ಲಿ ಬೆದರಿಕೆ  ಬಂದಿದೆ.

ಬೆದರಿಕೆ ಬಂದ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

 

LEAVE A REPLY

Please enter your comment!
Please enter your name here