
ಮುಂಬೈ: ಇಂದು ಮಹಾರಾಷ್ಟ್ರ ವಿಧಾನಸಭೆಯ ಎಲೆಕ್ಷನ್ಸ್ ಹಾಗೂ ಜಾರ್ಖಂಡ್‌ನಲ್ಲಿ 2ನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯಲಿದೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳು, ಹಾಗೂ ಜಾರ್ಖಂಡ್‌ನ 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಷೇರುಪೇಟೆ, ಬ್ಯಾಂಕ್, ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ-ಮಹಾಯುತಿ ಮೈತ್ರಿಕೂಟಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಫೈಟ್ ಇದೆ.
