
ಉಡುಪಿ: ದೇಶದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್, ನಾರ್ವೆ ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.
ಆತ್ಮನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ.
ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಒಪ್ಪಂದ ಮಾಡಿಕೊಂಡಿದ್ದು, ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು.
ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಭಾರತೀಯ ಸಂಸ್ಕೃತಿಯ ಪ್ರಕಾರ ಹಡಗಿಗೆ ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು.
ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ.
