
ನವದೆಹಲಿ: ಇಂಡಿಯಾ ಔಟ್ ಅಭಿಯಾನ ನಡೆಸಿ ಅಧಿಕಾರಕ್ಕೆ ಏರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೂರು ದಿನಗಳ ಪ್ರವಾಸಕ್ಕಾಗಿ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಅಧಿಕಾರಕ್ಕೆ ಏರಿದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಅಧಿಕೃತ ಪ್ರವಾಸ ಇದಾಗಲಿದೆ.
ಅ.7 ರಿಂದ 10 ರವರೆಗೆ ಮುಯಿಝು ಭಾರತದಲ್ಲಿ ಇರಲಿದ್ದು ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಪ್ರವಾಸದ ವೇಳೆ ಬೆಂಗಳೂರು, ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಲಿದ್ದಾರೆ.
ಮಾಲ್ಡೀವ್ಸ್ ಆರ್ಥಿಕತೆ ಮೊದಲೇ ಸಮಸ್ಯೆ ಎದುರಿಸುತ್ತಿತ್ತು. ಈಗ ಭಾರತೀಯರು ಪ್ರವಾಸಕ್ಕೆ ಹಿಂದೆ ಸರಿಯುತ್ತಿರುವ ಕಾರಣ ಮತ್ತಷ್ಟು ಹದಗೆಟ್ಟಿದೆ. ಈಗ ಸಂಬಂಧ ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತಕ್ಕೆ ಮುಯಿಝು ಬರುತ್ತಿದ್ದಾರೆ.
ಬೆಂಗಳೂರಿನಲ್ಲಿ ವಿಶ್ವದ ಹಲವು ಕಂಪನಿಗಳ ಕಚೇರಿಗಳಿಗೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಆಗುತ್ತಿದೆ. ಮಾಲ್ಡೀವ್ಸ್‌ನಲ್ಲಿ ಹೂಡಿಕೆದಾರರನ್ನು ಸೆಳೆಯಲು ಉದ್ಯಮ ಸಭೆಯಲ್ಲಿ ಭಾಗಿಯಾಗಲು ಮುಯಿಝು ಬೆಂಗಳೂರಿಗೆ ಬರುತ್ತಿದ್ದಾರೆ.
