Home ಸುದ್ದಿಗಳು ಭಾಷಣ ಮಾಡುತ್ತಿದ್ದ ವೇಳೆ ಕುಸಿದುಬಿದ್ದ ಮಲ್ಲಿಕಾರ್ಜುನ್‌ ಖರ್ಗೆ: ಅರೋಗ್ಯ ವಿಚಾರಿಸಿದ ಪ್ರಧಾನಿ

ಭಾಷಣ ಮಾಡುತ್ತಿದ್ದ ವೇಳೆ ಕುಸಿದುಬಿದ್ದ ಮಲ್ಲಿಕಾರ್ಜುನ್‌ ಖರ್ಗೆ: ಅರೋಗ್ಯ ವಿಚಾರಿಸಿದ ಪ್ರಧಾನಿ

0
ಭಾಷಣ ಮಾಡುತ್ತಿದ್ದ ವೇಳೆ ಕುಸಿದುಬಿದ್ದ ಮಲ್ಲಿಕಾರ್ಜುನ್‌ ಖರ್ಗೆ: ಅರೋಗ್ಯ ವಿಚಾರಿಸಿದ ಪ್ರಧಾನಿ

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಕಥುವಾನಲ್ಲಿ ಚುನಾವಣೆ ಪ್ರಚಾರದ ಭಾಗವಾಗಿ ಭಾಷಣ ಮಾಡುತ್ತಿದ್ದ ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ್‌ ಖರ್ಗೆ ಅಸ್ವಸ್ಥಗೊಂಡಿದ್ದರು.

83 ವರ್ಷದ ಮಲ್ಲಿಕಾರ್ಜುನ್‌ ಖರ್ಗೆ ಭಾಷಣ ಮಾಡಲಾಗದೆ ಕುಸಿಯುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್‌ ನಾಯಕರು ಖರ್ಗೆ ನೆರವಿಗೆ ಧಾವಿಸಿದರು. ತದನಂತರ ನೀರು ಕುಡಿದು ಸುಧಾರಿಸಿಕೊಂಡ ಮಲ್ಲಿಕಾರ್ಜುನ್‌ ಖರ್ಗೆ ತಮ್ಮ ಭಾಷಣವನ್ನು ಮುಂದುವರಿಸಿದರು.

ಚುನಾವಣೆ ನಿಮಿತ್ತ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಹೀಗಾಗಿ ಅಸ್ವಸ್ಥಗೊಂಡಿದ್ದರು.

ಅಕ್ಟೋಬರ್ 1 ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಜಸ್ರೋಟಾದ ಕಾಂಗ್ರೆಸ್ ಅಭ್ಯರ್ಥಿ ಠಾಕೂರ್ ಬಲ್ಬೀರ್ ಸಿಂಗ್ ಪರ ಖರ್ಗೆ ಪ್ರಚಾರ ನಡೆಸುತ್ತಿದ್ದರು.

ಅರೋಗ್ಯ ವಿಚಾರಿಸಿದ ಪ್ರಧಾನಿ: ಅಸ್ವಸ್ಥಗೊಂಡಿದ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ.

 

LEAVE A REPLY

Please enter your comment!
Please enter your name here