
ಕಂಕನಾಡಿ: ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಇನ್ನೊಂದು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ.
ರಸ್ತೆ ವಿಸ್ತರಣೆಗೆ ರೈಲ್ವೇ ಹೋರಾಟಗಾರರಿಂದ ಬೇಡಿಕೆ ಇತ್ತಾದರೂ ಸ್ಥಳಾವಕಾಶದ ಕೊರತೆಯ ಕಾರಣ ರಸ್ತೆ ವಿಸ್ತರಿಸಲು ಸಾಧ್ಯವಾಗಿರಲಿಲ್ಲ.
ನಾಗುರಿ ಕಡೆಯಿಂದ ಇರುವ ರಸ್ತೆಯ ಅಂತ್ಯದ ಸುಮಾರು 100 ಮೀ. ರಸ್ತೆ ಇಕ್ಕಟ್ಟಾಗಿರುವ ಹಿನ್ನೆಲೆಯಲ್ಲಿ 100 ಮೀ. ಮೊದಲೇ ಎಡಕ್ಕೆ ಇನ್ನೊಂದು ರಸ್ತೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ನಾಗುರಿ ಭಾಗದಲ್ಲಿ ಅಗಲವಾಗಿರುವ ಈ ರಸ್ತೆಯು ನಿಲ್ದಾಣಕ್ಕೆ ಪ್ರವೇಶ ಪಡೆಯುವಲ್ಲಿ ತುಂಬಾ ಕಿರಿದಾಗಿದ್ದು, ಇದರಿಂದ ಘನ ವಾಹನಗಳಿಗೆ ಸಂಚರಿ ಸುವುದು ಕಷ್ಟವಾಗಿದೆ. ಕೇವಲ ದ್ವಿಚಕ್ರವಾಹನ ಆಟೋ ಮತ್ತು ಕಾರುಗಳು ಸಂಚರಿಸಬಹುದಾಗಿದೆ.
ಇದಕ್ಕಾಗಿ ಸುಮಾರು 30 ಸೆಂಟ್ಸ್‌ನಷ್ಟು ಜಾಗವನ್ನು ಟಿಡಿಆರ್ ಮೂಲಕ ಸ್ಥಳೀಯ ರಿಂದ ಪಡೆದು ಕೊಳ್ಳಲಾಗಿದ್ದು, ಈಗಾಗಲೇ ರಸ್ತೆ ಗಾಗಿ ನೆಲ ಸಮತಟ್ಟುಗೊಳಿಸುವ ಕೆಲಸ ಆಗಿದೆ. ಕಾಂಕ್ರೀಟ್ ಕಾಮಗಾರಿ ಬಾಕಿ ಇದೆ.
