
ಮುಂಬೈ: ರಕ್ಷಣಾ ಉತ್ಪನ್ನಗಳನ್ನ ತಯಾರಿಸುವ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರ ಬಳಿ ನಡೆದಿದೆ.
ಈ ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ನಾಗ್ಬುರ ಬಳಿಯಿರುವ ಭಂಡಾರ ಜಿಲ್ಲೆಯ ಕಾರ್ಖಾನೆಯಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಐವರು ಸಾವನ್ನಪ್ಪಿರುವ ಶಂಕೆಯಿದೆ. ಸದ್ಯ ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಶೋಧ ನಡೆಸುತ್ತಿವೆ.
ಸ್ಫೋಟದ ಸಮಯದಲ್ಲಿ ಛಾವಣಿ ಕುಸಿದಿದ್ದು ಅದರ ಅಡಿಯಲ್ಲಿ 12 ಮಂದಿ ಸಿಲುಕಿದ್ದರು, ಅವರಲ್ಲಿ ಇಬ್ಬರನ್ನು ಮಾತ್ರ ರಕ್ಷಿಸಲಾಗಿದೆ. ಉಳಿದವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
