Home ಸುದ್ದಿಗಳು ಮೈಕ್ರೋ ಫೈನಾನ್ಸ್ ಮಸೂದೆ: ಸುಗ್ರೀವಾಜ್ಞೆಗೆ ಸಿಎಂ ಒಪ್ಪಿಗೆ

ಮೈಕ್ರೋ ಫೈನಾನ್ಸ್ ಮಸೂದೆ: ಸುಗ್ರೀವಾಜ್ಞೆಗೆ ಸಿಎಂ ಒಪ್ಪಿಗೆ

0
ಮೈಕ್ರೋ ಫೈನಾನ್ಸ್ ಮಸೂದೆ: ಸುಗ್ರೀವಾಜ್ಞೆಗೆ ಸಿಎಂ ಒಪ್ಪಿಗೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಕರ್ನಾಟಕ ಮೈಕ್ರೋ ಫೈನಾನ್ಸ್ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ರಾಜಭವನಕ್ಕೆ ಸರ್ಕಾರ ಸುಗ್ರೀವಾಜ್ಞೆ ಕಳುಹಿಸಿದೆ.

ಸುಗ್ರೀವಾಜ್ಞೆಯ ಪ್ರಕಾರ, ತಪ್ಪಿತಸ್ಥರಿಗೆ 10 ವರ್ಷಗಳ ಕಾಲ ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೇ 5 ಲಕ್ಷದವರೆಗೆ ದಂಡ ವಿಧಿಸಲು ಪ್ರಸ್ತಾಪವಿದೆ. ಇನ್ನು ಅನಧಿಕೃತವಾಗಿ ಸಾಲ ನೀಡಿದ್ದರೇ ಅದನ್ನು ಮನ್ನಾ ಮಾಡಲಾಗುವುದು. ನೋಂದಣಿ ರಹಿತ ಮೈಕ್ರೋ ಫೈನಾನ್ಸ್‌ಗಳ ಅಸಲು, ಬಡ್ಡಿ ಕೂಡ ಮನ್ನಾ ಆಗಲಿದೆ. ಖಾಸಗಿ ಬಡ್ಡಿದಾರರಿಗೂ ಕಡಿವಾಣ ಬೀಳಲಿದೆ.

  • ಸುಗ್ರೀವಾಜ್ಞೆಯಲ್ಲಿ ಏನಿದೆ?:
    ಲೇವಾದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ಮಾಡುವಂತಿಲ್ಲ. ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿಕೊಳ್ಳಬೇಕು.
  • ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕಡ್ಡಾಯ.
  • ನೋಂದಣಿ ವೇಳೆ ಸಾಲಗಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು.
  • ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಅಡಮಾನ ಇಟ್ಟುಕೊಂಡಿದ್ದರೆ ತಪ್ಪದೇ ಹಿಂತಿರುಗಿಸಬೇಕು.
  • ನೋಂದಣಿ ಮಾಡಿಕೊಳ್ಳದ ಲೇವಾದೇವಿದಾರರಿಗೆ ಸಾಲ ಮರುಪಾವತಿಸುವಂತಿಲ್ಲ. ಅಸಲು, ಬಡ್ಡಿ ಎರಡೂ ಮನ್ನಾ ಆಗಲಿದೆ.

ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರವು ಪ್ರಾಧಿಕಾರಕ್ಕೆ ಇರಲಿದ್ದು,ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಪ್ರಾಧಿಕಾರವು ನೋಟಿಸ್ ನೀಡದೆ ನೋಂದಣಿಯನ್ನು ಅಮಾನತು ಮಾಡಬಹುದಾಗಿದೆ.

 

LEAVE A REPLY

Please enter your comment!
Please enter your name here