ಉಡುಪಿ: ಗೋವುಗಳ ಮೇಲೆ ಕ್ರೌರ್ಯ ಹೆಚ್ಚಾಗುತ್ತಿದ್ದು. ದಿನೇ ದಿನೇ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ಬೆನ್ನಲ್ಲೇ ಇದೀಗ ಕರುವಿನ ಬಾಲ ಕತ್ತರಿಸಿದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಸೇಲ್ಸ್ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ್ದಾನೆ.
ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುರುಳ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ ನಿರಾಕರಿಸಿ ಮಹಿಳೆ ಮನೆ ಬಾಗಿಲು ಹಾಕಿದ್ದಾರೆ. ಆ ಬಳಿಕ ಮನೆ ಬಳಿಯೇ ಇದ್ದ 2 ವರ್ಷದ ಕರುವಿನ ಬಾಲ ಕತ್ತರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
