
ಇಂದು ಆಧಾರ್ ಕಾರ್ಡ್ ಅನ್ನೋದು ಬಹಳ ಮುಖ್ಯವಾದ ದಾಖಲೆಯಾಗಿದ್ದು, ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಈ ಆಧಾರ್ ಕಾರ್ಡ್ ಮುಖ್ಯವಾಗುತ್ತದೆ. ಅದರೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಿಮ್ಮ ಆಧಾರ್ ಅಪ್ಡೇಟ್ ಮಾಡುವುದು ಕೂಡ ಬಹಳ ಮುಖ್ಯ. ಇಂದು ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ರೇಷನ್ ಪಡೆಯಲು ಸಹ ಹೀಗೆ ಎಲ್ಲದಕ್ಕೂ ಈಗ ಅಧಾರ್ ಕಾರ್ಡೇ ಆಧಾರ. 12-ಅಂಕಿಯ ವಿಶಿಷ್ಟ ಆಧಾರ್ ಕಾರ್ಡ್ ಇಂದು ಬಹಳಷ್ಟು ಮುಖ್ಯವಾಗಿದೆ.
ಹೀಗೆ ಆಪ್ಡೆಟ್ ಮಾಡಿ
ಆಧಾರ್ ಅನ್ನು ಆಪ್ಡೆಟ್ ಮಾಡಲು ನೀವು UIDAI ನ ಅಧಿಕೃತ ವೆಬ್‌ಸೈಟ್ myAadhaar ಗೆ ಭೇಟಿ ನೀಡುವ ಮೂಲಕ ಅಲ್ಲಿ ಅಪ್ಡೇಟ್ ಮಾಡಬಹುದಾಗಿದೆ. ಇಲ್ಲಿ ತಮ್ಮ ವಿವರಗಳನ್ನು ನವೀಕರಿಸಬಹುದು. ಇಲ್ಲದಿದ್ದಲ್ಲಿ ಆಧಾರ್ ಅನ್ನು ನವೀಕರಿಸಲು ಸಾಧ್ಯವಾಗದಿದ್ದರೆ, ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಆಪ್ಡೆಟ್ ಮಾಡಬಹುದು.
ಕಡ್ಡಾಯ ವಾಗಿ ನವೀಕರಿಸಿ
ನೀವು ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷವಾಗಿದ್ದರೆ ಕಡ್ಡಾಯವಾಗಿ ನವೀಕರಣ ಮಾಡಲೇಬೇಕು. ಆಧಾರ್ ಕಾರ್ಡ್ ನವೀಕರಿಸುವಾಗ, ಏನಾದರೂ ಬದಲಾವಣೆಗಳನ್ನು ಮಾಡಲು ಇದ್ದರೆ ಆಧಾರ್‌ನಲ್ಲಿ ಬದಲಾವಣೆ ಮಾಡಬಹುದು.ಆಧಾರ್ ಹೊಂದಿರುವವರು ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ನವೀಕರಿಸಬಹುದು. ಇದಕ್ಕೆ ಮುಖ್ಯ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಮತ್ತು ಇತರರು ದುರುಪಯೋಗ ಮಾಡುವುದನ್ನು ತಪ್ಪಿಸುವುದಾಗಿದೆ.
ಉಚಿತ ನವೀಕರಣ
ಸಾಮಾನ್ಯವಾಗಿ ಆಧಾರ್ ವಿವರಗಳನ್ನು ನವೀಕರಿಸಲು ಸುಮಾರು ರೂ.50 ಅಥವಾ ರೂ.100 ಶುಲ್ಕವಿಧಿಸಬೇಕು. ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಈಗ ಉಚಿತವಾಗಿದೆ. ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೋಬೈಲ್ ಸಂಖ್ಯೆಯನ್ನು ಸಹ ನವೀಕರಣಗೊಳಿಸುವುದು ಕಡ್ಡಾಯ.
ಪಾನ್ ಕಾರ್ಡ್ ಲಿಂಕ್ ಕಡ್ಡಾಯ
ಇನ್ನೂ ಪಾನ್ ಕಾರ್ಡ್ಗೂ ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಗಳನ್ನು ರದ್ದು ಮಾಡಲಾಗುತ್ತದೆ. ಲಿಂಕ್ ಮಾಡಿಸದೇ ಇದ್ದಲ್ಲಿ 5 ರಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಆದ್ದರಿಂದ ಆಧಾರ್ ಆಪ್ಡೆಟ್ ಮಾಡುವುದು ಬಹಳ ಮುಖ್ಯ.
