ಕಠ್ಮಂಡು: ಗುರುವಾರದಂದು ಅಸ್ಸಾಂನಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಇದೀಗ ಶುಕ್ರವಾರ ಮುಂಜಾನೆ ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ. ನೇಪಾಳದ ಸಿಂಧುಪಾಲ್‌ಚೌಕ್ ಜಿಲ್ಲೆ ಭೂಕಂಪನದ ಕೇಂದ್ರಬಿಂದುವಾಗಿದೆ. ಸಿಂಧುಪಾಲ್‌ಚೌಕ್ ಜಿಲ್ಲೆಯ ಭೈರವಕುಂಡದಲ್ಲಿ ಮುಂಜಾನೆ ಸುಮಾರು 2:51ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣಾ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.
ಮುಂಜಾನೆಯ ಕಂಪನವು ನೇಪಾಳದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಪೂರ್ವ ಮತ್ತು ಮಧ್ಯ ಪ್ರದೇಶಗಳಲ್ಲಿ, ಭೂಕಂಪದ ಅನುಭವವನ್ನು ವರದಿ ಮಾಡಿದೆ. ಭಾರತ ಮತ್ತು ಟಿಬೆಟ್, ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ. ಪ್ರಾಣಾಪಾಯ ಅಥವಾ ಹೆಚ್ಚಿನ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಆದರೆ ಸ್ಥಳೀಯ ಅಧಿಕಾರಿಗಳು ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
