
ದೆಹರಾದೂನ್: ಸೋಮವಾರ ಗಂಗಾ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದದಲ್ಲಿ ಮಧ್ಯಪ್ರದೇಶದ 19 ವರ್ಷದ ಪೋಲ್ ವಾಲ್ಟ್ ಆಟಗಾರ ದೇವ್ ಮೀನಾ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾರೆ. 5.32ಮೀ ಎತ್ತರ ಜಿಗಿಯುವ ಮೂಲಕ ಈ ಋತುವಿನಲ್ಲಿ ಮೊದಲನೇ ರಾಷ್ಟ್ರೀಯ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.
2022 ರಲ್ಲಿ ತಮಿಳುನಾಡಿನ ಎಸ್. ಶಿವ ಅವರ 5.31 ಮೀ ದಾಖಲೆಯನ್ನು ದೇವ್ ಮೂರನೇ ಪ್ರಯತ್ನದಲ್ಲಿ ಮುರಿದಿದ್ದಾರೆ. ನನ್ನ ಹೊಸ ಕ್ಯೂಬನ್ ಕೋಚ್ ಏಂಜೆಲ್ ಗಾರ್ಸಿಯಾ ಎಸ್ಟೆಬಾನ್ ಅವರು 5.40 ಮೀ ಎತ್ತರಕ್ಕೆ ಜಿಗಿಯಲು ಪ್ರೇರೇಪಿಸಿದ್ದು ಈ ದಾಖಲೆ ನಿರ್ಮಾಣಕ್ಕೆ ಸಹಾಯ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಕೇವಲ ಮೂರು ವರ್ಷಗಳ ಹಿಂದಷ್ಟೇ ೪೦೦ ಮೀ ನಿಂದ ಪೋಲ್ ವಾಲ್ಟ್ ಗೆ ಬದಲಾಯಿಸಿಕೊಂಡ ದೇವ್ ಇದೀಗ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
