
ಇಂದು ಹೆಚ್ಚಿನ ಜನರು ಬಸ್ ಗಿಂತ ರೈಲು ಪ್ರಯಾಣವನ್ನೆ ಇಷ್ಟ ಪಡುತ್ತಾರೆ. ಈ ಡಿಜಿಟಲ್ ಯುಗದಲ್ಲಿ ಪ್ರಯಾಣ ಬೆಳೆಸುವುದು ಸಹ ಸುಲಭ. ಒಂದು ಮೊಬೈಲ್ ಇದ್ದರೆ ಸಾಕು ಮನೆಯಲ್ಲೇ ಕುಳಿತು ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಇದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ರೈಲಿನ ಟಿಕೆಟ್ ಬುಕ್ ಮಾಡುವ ಕಾಲ ಈಗಿಲ್ಲ. ಮನೆಯಲ್ಲಿ ಆರಾಮವಾಗಿ ಕುಳಿತು ನಿಮಗೆ ಬೇಕಾದ ಸಮಯಕ್ಕೆ ರೈಲಿನ ಟಿಕೆಟ್ ಬುಕ್ ಮಾಡಬಹುದು.
ಸುಲಭ ಪ್ರಯಾಣ
ಅತ್ಯಂತ ಆರಾಮದಾಯಕ ಮತ್ತು ಕಡಿಮೆ ಟಿಕೆಟ್ ಪ್ರಯಾಣಗಳಲ್ಲಿ ರೈಲಿನ ಪ್ರಯಾಣವು ಕೂಡ ಒಂದಾಗಿದ್ದು ಹೆಚ್ಚಿನ ಜನ ರೈಲು ಪ್ರಯಾಣ ಇಷ್ಟ ಪಡುತ್ತಾರೆ. ಪ್ರತಿನಿತ್ಯ ಸಾವಿರಾರು ಜನರು ತಮ್ಮ ದಿನನಿತ್ಯ ಸಾರಿಗೆಯಾಗಿ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ವಿಶೇಷ ಸೌಲಭ್ಯ
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯ ಗಳನ್ನು ನೀಡ್ತಾ ಇದ್ದು ವಿಶೇಷ ಸೌಲಭ್ಯಗಳನ್ನು ಸಹ ಒದಗಿಸುತ್ತದೆ. ಹೌದು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಗರ್ಭಿಣಿಯರಿಗೆ ಕೆಲವು ವಿಶೇಷವಾದ ಸೌಲಭ್ಯಗಳನ್ನು ಸಹ ಒದಗಿಸುತ್ತಿದೆ.
ಸೂಪರ್ ಆ್ಯಪ್ ಬಿಡುಗಡೆ
ಭಾರತೀಯ ರೈಲ್ವೆ ಇಲಾಖೆಯಿಂದ ಸೂಪರ್ ಆ್ಯಪ್ ತಯಾರಾಗುತ್ತಿದ್ದು ಪ್ರಯಾಣಿಕರಿಗೆ ಇನ್ಮುಂದೆ ಪ್ರಯಾಣ ಮತ್ತಷ್ಟು ಸುಲಭ. ಎಲ್ಲಾ ರೈಲ್ವೆ ಸೇವೆಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಸಿಗಲಿದ್ದು ರೈಲ್ವೆ ಗ್ರಾಹಕರು ಅಥವಾ ಪ್ರಯಾಣಿಕರು ವಿವಿಧ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಬದಲು ಒಂದೇ ಆ್ಯಪ್ ಬಳಸಲು ಅವಕಾಶ ಇದೆ.
ಈ ಅವಕಾಶ ಇದೆ
ಇದರ ಮೂಲಕ ಎಲ್ಲಾ ರೈಲ್ವೆ ಸೇವೆಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಾಗಿಸುವ ಒಂದು ಸೂಪರ್ ಆ್ಯಪ್ ಅನ್ನು ರೂಪಿಸುತ್ತಿದೆ. ಈ ಸೂಪರ್ ಆ್ಯಪ್ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಅವಕಾಶ ಇದೆ. ಅದೇ ರೀತಿ ಪಿಎನ್ಆರ್ ಸ್ಟೇಟಸ್ ಪರಿಶೀಲನೆ ಮಾಡಬಹುದು, ಟ್ರೈನ್ ಟ್ರ್ಯಾಕ್ ಸಹ ಮಾಡಬಹುದು.
ವೈದ್ಯಕೀಯ ಸೌಲಭ್ಯ
ಉಚಿತ ವೈದ್ಯಕೀಯ ಸೌಲಭ್ಯವನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು ಪ್ರಯಾಣದ ಸಮಯದಲ್ಲಿ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಯಾದಲ್ಲಿ ಭಾರತೀಯ ರೈಲ್ವೆ ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ನೀಡಲಿದೆ. ಪ್ರಯಾಣದ ವೇಳೆ ವಯಸ್ಸಾದವರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯರ ಸೌಲಭ್ಯವನ್ನು ಪಡೆಯಬಹುದು.
