Home ಸುದ್ದಿಗಳು ರಾಷ್ಟ್ರೀಯ ದೆಹಲಿ ಕಾಲ್ತುಳಿತದ ಘಟನೆ ಬಳಿಕ ಎಚ್ಚೆತ್ತ ರೈಲ್ವೆ ಸಚಿವಾಲಯ: ರೈಲು ನಿಲ್ದಾಣಗಳಿಗೆ ಕಾಯಕಲ್ಪದ ನಿರ್ಧಾರ

ದೆಹಲಿ ಕಾಲ್ತುಳಿತದ ಘಟನೆ ಬಳಿಕ ಎಚ್ಚೆತ್ತ ರೈಲ್ವೆ ಸಚಿವಾಲಯ: ರೈಲು ನಿಲ್ದಾಣಗಳಿಗೆ ಕಾಯಕಲ್ಪದ ನಿರ್ಧಾರ

0
ದೆಹಲಿ ಕಾಲ್ತುಳಿತದ ಘಟನೆ ಬಳಿಕ ಎಚ್ಚೆತ್ತ ರೈಲ್ವೆ ಸಚಿವಾಲಯ: ರೈಲು ನಿಲ್ದಾಣಗಳಿಗೆ ಕಾಯಕಲ್ಪದ ನಿರ್ಧಾರ

ನವದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ 18 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ, ರೈಲ್ವೆ ಸಚಿವಾಲಯವು ದೇಶಾದ್ಯಂತ ಜನದಟ್ಟಣೆ ನಿರ್ವಹಣೆ ಶಿಷ್ಟಾಚಾರ (ಕ್ರೌಡ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌)ಗಳ ಸಮಗ್ರ ಕೂಲಂಕಷ ಪರೀಕ್ಷೆಯನ್ನು ಪ್ರಕಟಿಸಿದೆ.

ವಿಶೇಷ ಆರು ತಿಂಗಳ ಅಭಿಯಾನದ ಭಾಗವಾಗಿ, ದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಜನರ ಚಲನೆಯನ್ನು ಸುಗಮಗೊಳಿಸಲು ಗಮನಾರ್ಹ ಸುಧಾರಣೆಗಳನ್ನು ಮಾಡಲಾಗುವುದು.

ಸಚಿವಾಲಯದ ಪ್ರಕಾರ, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅರವತ್ತು ಅಧಿಕ ದಟ್ಟಣೆಯ ರೈಲು ನಿಲ್ದಾಣಗಳು ಈಗ ನಿಗದಿತ ಗೊತ್ತುಪಡಿಸಿದ ಪ್ರದೇಶಗಳನ್ನು ಒಳಗೊಂಡಿರುತ್ತವೆ. ಸುಧಾರಿತ ಮೇಲ್ವಿಚಾರಣಾ ವ್ಯವಸ್ಥೆಗಳು ವಿಶೇಷವಾಗಿ, ರೈಲು ವಿಳಂಬದ ಸಮಯದಲ್ಲಿ ಪ್ರಯಾಣಿಕರ ಸಾಂದ್ರತೆಯನ್ನು ಟ್ರ್ಯಾಕ್ ಮಾಡುತ್ತದೆ. ಸ್ಥಳೀಯ ರೈಲ್ವೆ ಅಧಿಕಾರಿಗಳು ಸಾಂದರ್ಭಿಕ ಅರಿವು ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಶೇಷ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಪ್ರಯಾಗ್‌ರಾಜ್‌ಗೆ ಸಂಪರ್ಕ ಕಲ್ಪಿಸುವ ಮೂವತ್ತೈದು ಪ್ರಮುಖ ರೈಲು ನಿಲ್ದಾಣಗಳು ಕೇಂದ್ರ ರೈಲ್ವೇ ವಾರ್ ರೂಮ್‌ನಿಂದ ನಿರಂತರ ಕಣ್ಗಾವಲಿನಲ್ಲಿರಲಿವೆ. ಹೊಸದಿಲ್ಲಿ ರೈಲು ನಿಲ್ದಾಣವೊಂದರಲ್ಲೇ 200 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಭದ್ರತೆ ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ. ದಟ್ಟಣೆಯನ್ನು ಮೇಲ್ವಿಚಾರಿಸಲು, ಮೆಟ್ಟಿಲು ಮತ್ತು ಲ್ಯಾಂಡಿಂಗ್ ಪ್ರದೇಶದಲ್ಲಿ ಅನಧಿಕೃತವಾಗಿ ಕುಳಿತುಕೊಳ್ಳುವುದನ್ನು ತಡೆಯಲು ಕ್ಯಾಮೆರಾಗಳನ್ನು ಬಳಸಲಾಗುವುದು. ಗೊತ್ತುಪಡಿಸಿದ ಪ್ರದೇಶಗಳು ಮತ್ತು ಬಣ್ಣ ಬಳಿಯಲ್ಪಟ್ಟ ಆವರಣಗಳು ಪ್ರಯಾಣಿಕರ ಚಲನೆಯನ್ನು ಹೆಚ್ಚು ರಚನಾತ್ಮಕ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಸಹಾಯಕವಾಗಲಿದೆ. ಬಾಣಗಳು ಮತ್ತು ವಿಭಜಕಗಳು ಪ್ರಯಾಣಿಕರಿಗೆ ಗೊತ್ತುಪಡಿಸಿದ ಪ್ರದೇಶಗಳಿಗೆ ಜಂಜಡವಿಲ್ಲದೆ ತೆರಳಲು ಮಾಡಲು ಸಹಾಯ ಮಾಡಲಿದೆ ಎಂದು ಸಚಿವಾಲಯ ಹೇಳಿದೆ.

ದೆಹಲಿ ಘಟನೆಯ ಬಳಿಕ ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 

 

 

 

LEAVE A REPLY

Please enter your comment!
Please enter your name here