
ಜನರ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಆಯೋಗ ಕೊನೆಗೂ ದಿನಾಂಕ ಪ್ರಕಟಿಸುವ ಬಗ್ಗೆ ಮಾಹಿತಿ ನೀಡಿದೆ. ಲೋಕಸಭೆ ಚುನಾವಣೆ ಕಾವು ಎಲ್ಲ ರಾಜ್ಯಗಳಲ್ಲಿ ಹೆಚ್ಚಾಗಿದ್ದು ಈಗಾಗಲೇ ರಾಜಕೀಯ ಪಕ್ಷಗಳು ಪ್ರಚಾರ ತಂತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ನಾಳೆ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣೆ ಆಯೋಗ ಪ್ರಕಟಿಸಲಿದ್ದು, ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ನೀತಿ ಸಂಹಿತೆ ಜಾರಿ
ನಾಲ್ಕು ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಅದೇ ಸಮಯದಲ್ಲಿ ಘೋಷಿಸುವುದಾಗಿ ತಿಳಿಸಿದೆ.ಚುನಾವಣೆ ಘೋಷಣೆಯಾದ ತಕ್ಷಣ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಅದಕ್ಕೂ ಮುನ್ನ ಪಕ್ಷಗಳು ಭರವಸೆಗಳನ್ನು ನೀಡುತ್ತಾ, ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿವೆ. ಅದರ ಜೊತೆ ರಾಜಕೀಯ ಪಕ್ಷಗಳ ಮೈತ್ರಿ ಒಪ್ಪಂದ, ಸೀಟು ಹಂಚಿಕೆ ಇತ್ಯಾದಿ ಪ್ರಕ್ರಿಯೆಗಳೂ ವೇಗ ಪಡೆದುಕೊಂಡಿವೆ.
