
ಪ್ರಯಾಗರಾಜ್: ಪವಿತ್ರ ತ್ರಿವೇಣಿ ಸಂಗಮದಲ್ಲಿ ಭಾರತದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಅವರು ತೀರ್ಥಸ್ನಾನ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಪಾಲೆ ಆನಂದಿ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉಪಸ್ಥಿತರಿದ್ದರು.
ಕುಂಭಸ್ನಾನದ ಬಳಿಕ ದ್ರೌಪದಿ ಮುರ್ಮು ಅವರು ಅಕ್ಷಯವಟ ಮತ್ತು ಹನುಮಂತನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಆಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ.
ಮಹಾಕುಂಭವು ಏಕತೆ, ಸಾಮರಸ್ಯ ಮತ್ತು ಆಧ್ಯಾತ್ಮಿಕತೆಯ ಪವಿತ್ರ ಅಭಿವ್ಯಕ್ತಿಯಾಗಿದ್ದು ಬಡವ ಬಲ್ಲಿದರೆನ್ನದೆ ದೇಶ-ಭಾಷೆಗಳ ಗಡಿಗಳನ್ನು ದಾಟಿ ಎಲ್ಲರೂ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.
