
ಚಿನ್ನಕ್ಕೆ ಪ್ರತಿಯೊಬ್ಬ ವ್ಯಕ್ತಿಯು ಇಂದು ಹೆಚ್ಚಿನ ಮಾನ್ಯತೆಯನ್ನು ನೀಡುತ್ತಾರೆ. ಯಾಕಂದ್ರೆ ನಮಗೆ ಕಷ್ಟ ಕಾಲ ಅಂತ ಬಂದಾಗ ನೆನಪಾಗುವುದೇ ಚಿನ್ನ.ಅದೇ ರೀತಿ ಚಿನ್ನದ ಹೂಡಿಕೆಯಲ್ಲಿ ಬಹು ಲಾಭವೂಗಳಿಸಬಹುದಾಗಿದೆ. ಇಂದು ಆಭರಣ ತೊಟ್ಟು ಅಲಕಾಂರ ಮಾಡಿಕೊಳ್ಳುವುದಕ್ಕಿಂತಲೂ ಕಷ್ಟ ಕಾಲಕ್ಕೆ ಆಭರಣ ಅಡವಿಟ್ಟು ಹಣ ಪಡೆದುಕೊಳ್ಳುವವರು ಹೆಚ್ಚು ಮಂದಿ ಇದ್ದಾರೆ. ಹಾಗಿದ್ರೆ ಚಿನ್ನದ ಹೂಡಿಕೆ ಹೇಗೆ? ಯಾವರೀತಿ ಲಾಭ ಕರ ಇಲ್ಲಿದೆ ಮಾಹಿತಿ.
ಈ ಟಿಪ್ಸ್ ಫಾಲೋ ಮಾಡಿ
ಆಭರಣಗಳ ಬದಲಿಗೆ ನಾಣ್ಯದ ಹೂಡಿಕೆ
ನೀವು ಚಿನ್ನದ ಆಭರಣಗಳ ಬದಲಿಗೆ, ನಾಣ್ಯದ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನೀವು ಆಭರಣಗಳನ್ನು ಮಾರುಕಟ್ಟೆ ದರಗಳ ಜೊತೆಗೆ ಸುಮಾರು 16ಪರ್ಸೆಂಟ್ ವರೆಗೂ ತಯಾರಿಕಾ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಇದನ್ನು ನಾಣ್ಯದ ಮೂಲಕ ಸಂಗ್ರಹಿಸಿ ಉಪಯೋಗ ಮಾಡಿಕೊಳ್ಳಬಹುದು.
ಸಾವರಿನ್ ಗೋಲ್ಡ್
ಅದೇ ರೀತಿ ನೀವು ಸಾವರಿನ್ ಗೋಲ್ಡ್ ಬಾಂಡ್‌ಗಳ ಮೂಲಕವು ಹೂಡಿಕೆ ಮಾಡಲು ಅವಕಾಶ ಇದ್ದು ಈ ಬಾಂಡ್‌ಗಳನ್ನು ಚಿನ್ನದ ದರದಲ್ಲಿ, ಗ್ರಾಂ ಮೂಲಕ ನೀಡಲಾಗುತ್ತದೆ. ಇನ್ನೂ ಸಾವರಿನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆಗೆ ನೀವು ಹೆಚ್ಚಿನ ಬಡ್ಡಿ ಪಡೆಯಲು ಅವಕಾಶ ಇದ್ದು, ವಾರ್ಷಿಕ ಶೇಕಡಾ 2.50ಯಷ್ಟು ಬಡ್ಡಿಯನ್ನು ಸಹ ಪಡೆಯಬಹುದಾಗಿದೆ.
ಡಿಜಿಟಲ್ ಚಿನ್ನ
ಡಿಜಿಟಲ್ ಚಿನ್ನವು ಡಿಜಿಟಲ್ ರೂಪದಲ್ಲಿ ಶುದ್ಧ ಚಿನ್ನದ ಮೇಲೆ ಮಾಡುವ ಹೂಡಿಕೆಯಾಗಿದೆ. ಹೂಡಿಕೆದಾರರು ಸುಲಭವಾಗಿ ಡಿಜಿಟಲ್ ಚಿನ್ನವನ್ನು ರಿಯಲ್ ಟೈಮ್ ಮಾರ್ಕೆಟ್ ದರದ ಮೇಲೆ ಖರೀದಿ ಮಾಡಲು ಅವಕಾಶ ಇದೆ.
ಬಾಂಡ್ ಗಳ ಮೂಲಕ ಹೂಡಿಕೆ
ನಿರ್ದಿಷ್ಟ ಅವಧಿಯಲ್ಲಿ ಬಾಂಡ್ ಖರೀದಿಸುವ ಮೂಲಕ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಮಾರುಕಟ್ಟೆ ದರಕ್ಕೆ ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಿ, ಯೋಜನೆ ಮುಗಿದ ಬಳಿಕ ಅಂದಿನ ಮಾರುಕಟ್ಟೆ ದರದಲ್ಲಿ ಹಣ ಪಡೆಯಬಹುದು.
ಇಂದು ಚಿನ್ನದ ಬೆಲೆ
ಇಂದು 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ, 57,400 ರೂ. ಆಗಿದ್ದು 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 62,620ರೂ. ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,300 ರೂಪಾಯಿ ಆಗಿದ್ದು, ನಿನ್ನೆ ಇದ್ದ ಬೆಲೆ ಗಿಂತ ಇಂದು ಏರಿಕೆ ಕಂಡಿದೆ.ಮುಂದಿನ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಾಷಬಹುದಾಗಿದೆ. ಒಟ್ಟಿನಲ್ಲಿ ಚಿನ್ನದ ಹೂಡಿಕೆ ಭವಿಷ್ಯದಲ್ಲಿ ಬಹಳ ಒಳಿತಗಾಬಹುದು.
