ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರ “ಎಕ್ಸ್” ಹ್ಯಾಂಡಲ್ ಅನ್ನು ವಹಿಸಿಕೊಂಡ ಆರು ಮಹಿಳೆಯರಲ್ಲಿ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ವೈಶಾಲಿ ಮತ್ತು ವಿಜ್ಞಾನಿಗಳಾದ ಎಲಿನಾ ಮಿಶ್ರಾ ಮತ್ತು ಶಿಲ್ಪಿ ಸೋನಿ ಸೇರಿದ್ದಾರೆ.
ಮೋದಿ ಅವರ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿರುವ ವೈಶಾಲಿ, ಎಲಿನಾ ಮಿಶ್ರಾ, ಶಿಲ್ಪಿ ಸೋನಿ, ಅಂಜ್ಲೀ ಅಗರ್ವಾಲ್, ಅನಿತಾ ದೇವಿ ಮತ್ತು ಅಜೈತಾ ಶಾ ನಾವು ಮೋದಿ ಅವರ ಹ್ಯಾಂಡಲ್ ನಲ್ಲಿ ಬರೆಯಲು ರೋಮಾಂಚನಗೊಂಡಿದ್ದೇವೆ ಮತ್ತು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡಲು ನಮ್ಮ ಸಂದೇಶಗಳನ್ನು ಹಂಚಿಕೊಂಡಿದ್ದೇವೆ ಎಂದಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದಂದು ‘ನಾರಿ ಶಕ್ತಿ’ಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮಹಿಳಾ ಸಾಧಕಿಯರು ಬಳಸಿರುವುದು ಇದೇ ಮೊದಲಲ್ಲ. 2020 ರ ಅಂತರರಾಷ್ಟ್ರೀಯ ಮಹಿಳಾ ದಿನದಂದು, ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಏಳು ಮಹಿಳಾ ಸಾಧಕಿಯರು ನಿರ್ವಹಿಸಿದ್ದು, ಇದು ಇತರರಿಗೆ ಸ್ಫೂರ್ತಿ ನೀಡಲು ಜಾಗತಿಕ ವೇದಿಕೆಯನ್ನು ಒದಗಿಸಿತ್ತು.
