
ಕಾರ್ಕಳ: ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ (44) ಹತನಾಗಿದ ನಂತರ ಈ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ.
ನಕ್ಸಲರು ಪಿತಬೈಲಿನಲ್ಲಿರುವ ಮನೆಗಳಿಗೆ ಪಡಿತರ ಮತ್ತು ಹಣ ಪಡೆಯಲು ಬಂದು ಪೊಲೀಸರು ರಚಿಸಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಸೋಮವಾರ ಪೀತಬೈಲಿನಲ್ಲಿರುವ ಮನೆಯೊಂದಕ್ಕೆ ನಕ್ಸಲರು ಪಡಿತರ ಪಡೆಯಲು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿ ಬಳಿಕ ಎಎನ್ಎಎಫ್‌ನವರು ಇಲ್ಲಿರುವ ಮೂರು ಮನೆಯವರನ್ನು ಸ್ಥಳಾಂತರಿಸಿ ಹೊಂಚು ಹಾಕಿ ಕುಳಿತಿದ್ದರು.
ಕತ್ತಲಾವರಿಸುತ್ತಿದ್ದಂತೆ ನಾಲ್ಕು ಮಂದಿ ನಕ್ಸಲರು ಮನೆಯ ಬಳಿ ಕಣಿಸಿಕೊಂಡಿದ್ದಾರೆ. ಈ ಪೈಕಿ ಮೂವರು ಕಾವಲುಗಾರರಾಗಿ ದೂರ ನಿಂತು ಒಬ್ಬ ಪಡಿತರ ಪಡೆಯಲು ಮನೆ ಸಮೀಪ ಬಂದಿದ್ದ ನಕ್ಸಲ್ ತಂಡದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಇದ್ದರು ಎಎನ್‌ಎಫ್‌ನವರು ನಕ್ಸಲರಿಗೆ ಶರಣಾಗಲು ಸೂಚಿಸಿದ್ದಾರೆ ನಕ್ಸಲರು ಶರಣಾಗಲು ನಿರಾಕರಿಸಿ ಗುಂಡು ಹಾರಿಸಿದಾಗ ಫೈರಿಂಗ್ ಶುರುವಾಗಿದೆ.
ದೂರ ನಿಂತಿದ್ದ ಮೂವರು ಗುಂಡು ಹಾರಿಸುತ್ತಾ ಕಾಡಿನೊಳಗೆ ಓಡಿಹೋಗಿದ್ದಾರೆ ಮನೆಯ ಸಮೀಪ ಇದ್ದ ನಕ್ಸಲ್‌ಗೆ ಗುಂಡು ತಾಗಿದೆ. ನಂತರ ಪೊಲೀಸರು ಹತ್ತಿರ ಹೋಗಿ ನೋಡಿದಾಗ ಆತ ನಕ್ಸಲ್ ಮುಖಂಡ ವಿಕ್ರಂ ಗೌಡ ಎಂದು ಗೊತ್ತಾಗಿದೆ. ಎರಡು ಗುಂಡುಗಳು ಪಕ್ಕೆಲುಬು, ಒಂದು ಗುಂಡು ತೊಡೆಗೆ ತಗುಲಿತ್ತು ಎಂದು ತಿಳಿದು ಬಂದಿದೆ.
ಕೇರಳದ ಜೈಲಿನಲಿದ್ದಾಳೆ ವಿಕ್ರಂ ಗೌಡ ಹೆಂಡತಿ: ನಕ್ಸಲ್ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್ ಆಗಿದ್ದು, ಪ್ರಸ್ತುತ ಕೇರಳದ ತೃತ್ತೂರು ಜಿಲ್ಲೆಯ ವಿಯ್ಯರು ಜೈಲಿನಲ್ಲಿದ್ದಾರೆ.
ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
