Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಹೊಸ ಗ್ಯಾರೆಂಟಿಗೆ ರಾಜ್ಯ ಸರ್ಕಾರದಿಂದ ಶೀಘ್ರವೇ ಗ್ರೀನ್ ಸಿಗ್ನಲ್

ಹೊಸ ಗ್ಯಾರೆಂಟಿಗೆ ರಾಜ್ಯ ಸರ್ಕಾರದಿಂದ ಶೀಘ್ರವೇ ಗ್ರೀನ್ ಸಿಗ್ನಲ್

0
ಹೊಸ ಗ್ಯಾರೆಂಟಿಗೆ ರಾಜ್ಯ ಸರ್ಕಾರದಿಂದ ಶೀಘ್ರವೇ ಗ್ರೀನ್ ಸಿಗ್ನಲ್

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ಜನತೆಗೆ ಬಂಪರ್ ಲಾಟರಿ ಹೊಡೆದಂತಾಗಿದೆ‌. ಈಗಾಗಲೇ ಪಂಚ ಯೋಜನೆಯಲ್ಲಿ ನಾಲ್ಕು ಯೋಜನೆಯನ್ನು ಅತ್ಯಂತ ಯಶಸ್ವಿಯಾಗೇ ನಿಭಾಯಿಸುತ್ತಿರುವ ಸರ್ಕಾರ ಯುವನಿಧಿ ಯೋಜನೆಯನ್ನು ಕೂಡ ಇನ್ನೇನು ಕೆಲವೇ ದಿನದಲ್ಲಿ ಬಿಡುಗಡೆ ಮಾಡಲಿದೆ. ಆದರೆ ಇದರ ಬೆನ್ನಲ್ಲೆ ರಾಜ್ಯದ ಜನತೆಗೆ ಆರೋಗ್ಯ ಸಂಬಂಧಿತ ಉಪಯುಕ್ತ ಆಗುವ ಹೊಸ ಯೋಜನೆ ಒಂದನ್ನು ಪರಿಚಯಿಸಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈಯೋಜನೆ?
ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಂಬಂಧಿತ ಇರುವ ಯೋಜನೆಯ ಹೆಸರು ಆರೋಗ್ಯ ಯೋಜನೆ ಎಂದು ಇಡಲಾಗಿದೆ. ಈ ಯೋಜನೆಯ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಆರೋಗ್ಯ ಇಲಾಖೆ ಮುಂದಾಗಿದೆ. ಅಂದರೆ 30ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ನಡೆಸಿ ಸ್ಥಳದಲ್ಲಿ ಔಷಧ ವಿತರಣೆ ಮತ್ತು ಹೆಚ್ಚಿನ ಅಗತ್ಯ ಇದ್ದರೆ ಸಮೀಪದ ಕೇಂದ್ರ ಸಮರ್ಪಿಸಲು ತಿಳಿಸಲಾಗುವುದು.

ಈ ಯೋಜನೆ ಕರ್ನಾಟಕದಲ್ಲಿ ಈವರೆಗೆ ಜಾರಿಗೆ ಬಂದಿಲ್ಲ. ಸಂಪುಟ ಸಭೆಯಲ್ಲಿ ಇದರ ಅನುಮೋದನೆಗಾಗಿ ಕಾಯಲಾಗುತ್ತಿದ್ದು, ಮುಂದಿನ ತಿಂಗಳಿನಿಂದಲೇ ಜಿಲ್ಲಾವಾರು ಸೇವೆ ಆರಂಭ ಆಗಲಿದ್ದು, 8ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಕಾರ್ಯನಿರ್ವಹಿಸಲಿದೆ. ಮೊದಲ ಹಂತದ ಔಷಧ ಖರೀದಿ ಮತ್ತು ತಪಾಸಣೆ ಇತರ ಪ್ರಕ್ರಿಯೆಗೆ ಕೆಲಸ ಕಾರ್ಯಗಳು ನಡೆಯುತ್ತಲಿದೆ.

ಈ ವಿಚಾರಗಳ ಅರಿವು
ರಾಷ್ಟ್ರೀಯ ಆರೋಗ್ಯ ಮಿಷನ್ ನಿಂದ ಅನುದಾನ ಪಡೆದು ಬಳಿಕ ಎಲ್ಲ ಜಿಲ್ಲೆಯ ತಾಲೂಕು ಮತ್ತು ಗ್ರಾಮಾಂತರ ಮಟ್ಟದಲ್ಲಿ ಆಯಾ ಭಾಗದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಸಲಹೆ ಮಾರ್ಗ ಸೂಚಿಯನ್ನು ನೀಡಲಿದ್ದಾರೆ. ಗರ್ಭಕಂಠ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಗಳಗಂಡ ಇನ್ನಿತರ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ‌. 16ವಾರದ ಅಂತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖೇನ ತಂಡ ತಂಡವಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು 20 ಮನೆಗಳಿಗೆ ಒಬ್ಬರಂತೆ ಭೇಟಿ ನೀಡಲಿದ್ದಾರೆ. ಭೇಟಿ ನೀಡಿದ್ದ ಮನೆ ಹೊರಗೆ ಗೃಹ ಆರೋಗ್ಯ ಕೇಂದ್ರದ ಬಣ್ಣದ ಕೋಡ್ ಸ್ಟಿಕರ್ ಅನ್ನು ಸಹ ಹಾಕಲಾಗುವುದು.

ತರಬೇತಿ
ಮೊದಲ ಹಂತದ ಪ್ರಕ್ರಿಯೆ ನಾಲ್ಕು ವಿಭಾಗದಿಂದ 8 ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಸಿಬಂದಿಗಳಿಗೆ ಪೂರ್ವ ತರಬೇತಿ ನೀಡಲಾಗುವುದು. ಡಿಸೆಂಬರ್ ನಿಂದ ಈ ತರಬೇತಿ ಪ್ರಕ್ರಿಯೆ ಆರಂಭ ಆಗಲಿದ್ದು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಸಮೀಕ್ಷಣಾ ಅಧಿಕಾರಿಗಳು, ಇನ್ನಿತರ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಮತ್ತು ಇತರ ಸಿಬಂದಿಗೆ ತರಬೇತಿ ನೀಡಲಾಗುವುದು. ಈ ಮೂಲಕ ಈ ಆರೋಗ್ಯ ಸೌಲಭ್ಯದ ಯೋಜನೆ ರಾಜ್ಯದ ಬಹುತೇಕ ಜನರಿಗೆ ಅದರಲ್ಲೂ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಬಹಳಷ್ಟು ನೆರವು ನೀಡಲಿದೆ ಎಂದು ಹೇಳಬಹುದು.

 

LEAVE A REPLY

Please enter your comment!
Please enter your name here