Home ಸುದ್ದಿಗಳು ದಿನನಿತ್ಯ ಓದುವ ದಿನಪತ್ರಿಕೆಯನ್ನು ಈ ರೀತಿಯಾಗಿ ಬಳಸುವಂತಿಲ್ಲ- FSSAI ಸೂಚನೆ

ದಿನನಿತ್ಯ ಓದುವ ದಿನಪತ್ರಿಕೆಯನ್ನು ಈ ರೀತಿಯಾಗಿ ಬಳಸುವಂತಿಲ್ಲ- FSSAI ಸೂಚನೆ

0
ದಿನನಿತ್ಯ ಓದುವ ದಿನಪತ್ರಿಕೆಯನ್ನು ಈ ರೀತಿಯಾಗಿ ಬಳಸುವಂತಿಲ್ಲ- FSSAI ಸೂಚನೆ

ಇಂದು ದಿನ ಪತ್ರಿಕೆಗಳು ಎಷ್ಟು ಉಪಯೋಗ ಇದೆ ಎಂದು ತಿಳಿದೆ ಇದೆ. ದಿನ ನಿತ್ಯ ಆಗುವ ಆಗು ಹೋಗುಗಳನ್ನು ದಿನಪತ್ರಿಕೆ ಮೂಲಕವೇ ಓದಿ ತಿಳಿಯುತ್ತೇವೆ. ಆದರೆ ಈ ದಿನ ಪತ್ರಿಕೆಯನ್ನು ಇಂದು ವಿವಿಧ ರೀತಿಗಳಾಗಿ ಬಳಕೆ ಮಾಡುತ್ತಾರೆ. ಈ ವಿಚಾರವಾಗಿ ಮಹತ್ವದ ಮಾಹಿತಿಯೊಂದು ಬಂದಿದ್ದು, ಜನಪರ ಆರೋಗ್ಯ ಕಾಳಜಿಯ ಅಂಶಗಳೂ ಕೂಡ ಮುಖ್ಯವಾಗುತ್ತದೆ. ಅಂದರೆ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ವಾಗುತ್ತದೆ.

ಮಾರ್ಗಸೂಚಿ ಅನ್ವಯ

ಇಂದು ಜನರು ಕರಿದ ಆಹಾರ ಪದಾರ್ಥವನ್ನು, ವಿವಿಧ ಮನೆಗೆ ಬೇಕಾದ ವಸ್ತುಗಳನ್ನು ಪ್ಲಾಸ್ಟಿಕ್, ದಿನ‌ಪತ್ರಿಕೆ ಇತ್ಯಾದಿಗಳಲ್ಲಿ ಪ್ಯಾಕ್ ಮಾಡಿಕೊಂಡು ಬಳಕೆ ಮಾಡುತ್ತಾರೆ. ಇಂದು ಹೊಟೇಲ್ ಉದ್ಯಮದಿಂದ ಹಿಡಿದು ಸಣ್ಣ ಪುಟ್ಟ ಅಂಗಡಿಗಳವರೆಗೂ ಇಂತಹ ಪ್ಲಾಸ್ಟಿಕ್, ದಿನಪತ್ರಿಕೆ ಇತ್ಯಾದಿ ಬಳಸುತ್ತಾರೆ. ಅದರೆ ಆಹಾರ ಸುರಕ್ಷತೆ ಮತ್ತು ಪ್ರಾಮಾಣಿಕ ಪ್ರಾಧಿಕಾರದ ಮಾರ್ಗ ಸೂಚಿಯ ಅನ್ವಯ ಕೆಲವೊಂದು ನಿಯಮಗಳನ್ನು ಪಾಲಿಸುವುದು ಮುಖ್ಯ.

ಆಹಾರ ಕಲಬೆರೆಕೆ

ಇಂದು ವಸ್ತುಗಳ ಆಹಾರ ಕಲಬೆರಕೆ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಕೆಲವೊಂದು ಆರೋಗ್ಯಕರ ವಿಚಾರದ ಬಗ್ಗೆ ಗಮನ ಹರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಈಗ ಬಂದಿರುವ ಈ ಅಗತ್ಯ ಮಾಹಿತಿಯನ್ನು ಅಂಗಡಿ ಮಾಲಕರು ಮತ್ತು ಗ್ರಾಹಕರಿಗೆ ಈ ಬಗ್ಗೆ ತಿಳಿಯುವ ಅವಶ್ಯಕತೆ ಬಹಳ ಇದೆ.

ಈ ನಿಯಮ ಅನುಸರಿಸಬೇಕು
ಇಂದು FSSAI ಅಗತ್ಯ ಮಾರ್ಗ ಸೂಚಿ ನೀಡಿದ್ದು, ಆಹಾರ ವಸ್ತುಗಳನ್ನು ಪ್ಯಾಕ್ ಮಾಡಲು ದಿನ ಪತ್ರಿಕೆ ಬಳಸದಂತೆ ಸೂಚಿಸಲಾಗಿದೆ. ಈಗಾಗಲೇ ಈ ಹಿಂದೆ ಮಾಹಿತಿ ನೀಡಿದ್ದರೂ ಈಗ ಮತ್ತೆ ಈ ಬಗ್ಗೆ ಮಾಹಿತಿ ನೀಡಿದೆ. FSSAI ಸಿಇಒ ಕಮಲ ವರ್ಧನ್ ರಾವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಇತ್ತೀಚೆಗೆ ಆರೋಗ್ಯ ಸಮಸ್ಯೆ ಗಳು ಹೆಚ್ಚಾಗಿದ್ದು, ಮಾರಕ ಆರೋಗ್ಯ ಸಂಬಂಧಿತ ಕಾಯಿಲೆಗೆ ಈ ರೀತಿ ವಸ್ತುಗಳಿಗೆ ದಿನಪತ್ರಿಕೆ ಪ್ಯಾಕ್ ಮಾಡಿಕೊಡುವ ಬಳಕೆ ಕಾರಣ ಎಂಬುದು ತಿಳಿದು ಬಂದಿದೆ. ಹೀಗಾಗಿ ಸೂಕ್ತವಾದ ಕ್ರಮ ಜಾರಿಗೆ ಬರಲಿದೆ ಎಂದಿದ್ದಾರೆ.

ದಿನ ಪತ್ರಿಕೆ ಮುದ್ರಿಸುವ ಇಂಕ್ ನಿಂದ ಇತರ ರಾಸಾಯನಿಕ ಅಂಶ ಇರಲಿದ್ದು, ಇದರಿಂದಾಗಿ ಆಹಾರ ಸುತ್ತಿ ನೀಡುವ ಕಾರಣ ಆ ಆಹಾರಕ್ಕೆ ಆ ರಾಸಾಯನಿಕ ಅಂಶ ಸೇರಿಕೊಂಡು ಆರೋಗ್ಯ ಕೆಡಲಿದೆ ಹಾಗಾಗಿ ಇನ್ನು ಮುಂದೆ ಗ್ರಾಹಕರು ಮತ್ತು ವ್ಯಾಪಾರಿಗಳು ದಿನಪತ್ರಿಕೆಯ ಮೂಲಕ ಆಹಾರ ನೀಡಲು ಬಳಸಬಾರದು ಕಡ್ಡಾಯ ನಿಯಮ ಜಾರಿಗೆ ತರಲು ಸೂಚಿಸಿದೆ.

ಒಟ್ಟಿನಲ್ಲಿ ಜನಪರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನುಸರಿಸುವುದು ಬಹಳ ಮುಖ್ಯ. ಇದು ಪರಿಣಾಮಕಾರಿಯಾಗಿ ಜಾರಿ ಮಾಡುವ ದಂಡ ಸಹ ಬೀಳಲಿದೆ.

 

LEAVE A REPLY

Please enter your comment!
Please enter your name here