Home ಸುದ್ದಿಗಳು ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಪತ್ತೆ

ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಪತ್ತೆ

0
ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಪತ್ತೆ

ಬಜಪೆ: ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಗುರುಪುರದ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಬಡಗ ಎಡಪದವು ಚಟ್ಟೆ ಪಾದೆ ನಿವಾಸಿ ರಮೇಶ್ ಕುಲಾಲ್ (48) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಶನಿವಾರ ಸಂಜೆ ನಾಪತ್ತೆಯಾಗಿದ್ದ ರಮೇಶ್ ಕುಲಾಲ್ ರವಿವಾರ ಅವರ ಮೊಬೈಲ್ ಮತ್ತು ಪಾದರಕ್ಷೆ ಗುರುಪುರ ಸೇತುವೆ ಬಳಿ ಪತ್ತೆಯಾಗಿದ್ದು ಅವರು ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದು ಶಂಕೆ ವ್ಯಕ್ತವಾಗಿತ್ತು.

ಎಸ್‌ಡಿಆರ್‌ಎಫ್ ಮತ್ತು ಬಜಪೆ ಪೊಲೀಸರು ನದಿಯ ನೀರಿನಲ್ಲಿ ಅವರಿಗಾಗಿ ಶೋಧೆ ನಡೆಸಿದ್ದರು. ಈ ವೇಳೆ ರಮೇಶ್ ಕುಲಾಲ್ ಅವರ ಶವ ಪತ್ತೆಯಾಗಿದೆ.

ಭೂಸ್ವಾಧಿಧೀನ ಪ್ರಕ್ರಿಯೆಯನ್ವಯ ಲಭಿಸಿದ ಪರಿಹಾರದ ಹಣದ ವಿಷಯದಲ್ಲಿ ತಾಯಿ ಮತ್ತು ಸಹೋದರರೊಳಗೆ ಉಂಟಾದ ವಿವಾದದಿಂದಾಗಿ ಖನ್ನತೆಗೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ರಮೇಶ್ ಮಂಗಳೂರಿನ ಇನ್‌ಲ್ಯಾಂಡ್ ಕಂಪೆನಿಯಲ್ಲಿ ಜೆಸಿಬಿ ಆಪರೇಟರ್ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಪತ್ನಿ ಇಬ್ಬರು ಪುತ್ರರನ್ನು ಆಗಲಿದ್ದಾರೆ.

 

LEAVE A REPLY

Please enter your comment!
Please enter your name here