Home ಸುದ್ದಿಗಳು 10 ವರ್ಷದ ಹಿಂದೆ ನಿಂತುಹೋಗಿದ್ದ ಪಿಲಿಕುಳ ಕಂಬಳ ಮತ್ತೆ ಶುರು

10 ವರ್ಷದ ಹಿಂದೆ ನಿಂತುಹೋಗಿದ್ದ ಪಿಲಿಕುಳ ಕಂಬಳ ಮತ್ತೆ ಶುರು

0
10 ವರ್ಷದ ಹಿಂದೆ ನಿಂತುಹೋಗಿದ್ದ ಪಿಲಿಕುಳ ಕಂಬಳ ಮತ್ತೆ ಶುರು

ಮಂಗಳೂರು: 10 ವರ್ಷದ ಹಿಂದೆ ನಿಂತುಹೋಗಿದ್ದ ಪಿಲಿಕುಳ ಕಂಬಳ ನವೆಂಬರ್ 17, 18ರಂದು ನಡೆಯಲಿದೆ.

ಸರಕಾರಿ ಪ್ರಾಯೋಜಿತವಾದ ಕಂಬಳ 10 ವರ್ಷದ ಹಿಂದೆ ನಿಂತುಹೋಗಿದ್ದರಿಂದ ಕಂಬಳದ ಕರೆಗಳಲ್ಲಿ ಹೂಳು ತುಂಬಿ, ಗಿಡ- ಗಂಟಿ ಬೆಳೆದಿತ್ತು. ಕರೆ ಸಂಪೂರ್ಣವಾಗಿ ಪಾಳುಬಿದ್ದ ಸ್ವರೂಪದಲ್ಲಿತ್ತು.

ಈಗ ಕಂಬಳ ಕರೆಯ ಮರುನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥೆ ಮುಂತಾದ ಕೆಲಸಗಳು ನಡೆಸಲಾಗುತ್ತಿದೆ.

ಪಿಲಿಕುಳ ಜೋಡುಕರೆ ಕಂಬಳದ ಕರೆ 133 ಮೀ. (180 ಕೋಲು) ಉದ್ದವಿದೆ. ಸುಮಾರು 11 ಸಾವಿರ ಕೆಂಪುಕಲ್ಲು 60 ಲೋಡ್‌ ಮರಳು ಹಾಗೂ ಜಲ್ಲಿ ಹುಡಿ ಬಳಸಿ ಕಂಬಳ ಗದ್ದೆ ಸಿದ್ದಪಡಿಸಲಾಗಿದೆ. ಸೆ.4ರಂದು ನೂತನ ಕರೆಗೆ ಮುಹೂರ್ತ ನಡೆದಿತ್ತು.

ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನ ಮನೆಯ ಮುಂಭಾಗದಲ್ಲಿರುವ “ನೇತ್ರಾವತಿ- ಫಲ್ಗುಣಿ’ ಜೋಡುಕರೆಯಲ್ಲಿ ಕಂಬಳ ವಿಜೃಂಭಣೆಯಿಂದ ನಡೆದಿತ್ತು.

85 ಜತೆ ಕೋಣಗಳು ಪಾಲ್ಗೊಂಡಿದ್ದವು. ಆದರೆ ಆ ಬಳಿಕ ಕಂಬಳದ ವಿರುದ್ಧ ಪೆಟಾ ಸಂಸ್ಥೆ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಇದೀಗ ಕಾನೂನಿಗೆ ತಿದ್ದುಪಡಿ ತಂದು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲಾಗಿದ್ದು ಮತ್ತೆ ಕಂಬಳ ಶುರುವಾಗಿದೆ.

 

LEAVE A REPLY

Please enter your comment!
Please enter your name here