
ಸುರತ್ಕಲ್: ಪ್ರಥಮ ವರ್ಷದ ವಿದ್ಯಾರ್ಥಿಗೆ ರ‍್ಯಾಗಿಂಗ್ ನಡೆಸಿದ ಆರೋಪದಲ್ಲಿ ಮೂರನೇ ವರ್ಷದ 9 ಮಂದಿ ಕೇರಳ ಮೂಲದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಸುರತ್ಕಲ್ ಬಳಿಯ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಆರೋಪಿಗಳನ್ನು ಕೇರಳ ಮೂಲದ ಸಿದಾಯತ್, ಅಮಲ್ ಕೃಷ್ಣ ಸಾಜಿದ್, ಅಜೀಮ್ ಶಾ, ಆಡಮ್, ಫಯಾದ್, ಅತುಲ್ ಕೆ., ದಿಲೀಪ್, ಅಫೈಲ್, ಶಿಬಿನ್ ಎಂದು ಗುರುತಿಸಲಾಗಿದೆ. ಇಡ್ಯಾ ಗ್ರಾಮದಲ್ಲಿ ಆರೋಪಿ ಸಿದಾಯತ್ ಮಾಡಿಕೊಂಡಿದ್ದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
