
ಪಾಂಡೇಶ್ವರ: ಗೂಡ್‌ಶೆಡ್‌ನಲ್ಲಿರುವ ರೈಲು ತಂಗುದಾಣಕ್ಕೆ ತೆರಳುವ ರೈಲು ಹಳಿಯ ಪಾಂಡೇಶ್ವರ ಸಮೀಪ ಹಳಿ ಹಾಗೂ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ವಾಹನ ಸವಾರವು ಪರದಾಡುತ್ತಿದ್ದಾರೆ.
ಶನಿವಾರ ರಾತ್ರಿ 8 ಗಂಟೆಯಿಂದ ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸ್ಥಳೀಯ ವಾಹನ ಸವಾರರಿಗೆ ಇದರಿಂದ ಬಹಳಷ್ಟು ಕಷ್ಟಕರವಾಗಿದ್ದು, ಸುತ್ತು ಬಳಸಿ ಸಂಚರಿಸ ಬೇಕಾದ ಅನಿವಾರ್ಯತೆ ಎದುರಾಗಿದೆ.
ಪದೇ ಪದೇ ರೈಲ್ವೇ ಗೇಟ್‌ನಲ್ಲಿ ಸಮಸ್ಯೆ ಎದುರಾಗಿ ಸಾರ್ವಜನಿಕರಿಗೆ ಸಮಸ್ಯೆ ನೀಡುವ ಬದಲು ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅ. 22ರಂದು ಬೆಳಗ್ಗೆ 8 ಗಂಟೆಗೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದ್ದು ಜನರು ಕಾಮಗಾರಿ ಪೂರ್ಣಗೊಳ್ಳಲು ಕಾಯುತ್ತಿದ್ದಾರೆ.
