
ಮುಂಬೈ: ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ರಕ್ತದೊತ್ತಡದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಮಧ್ಯರಾತ್ರಿ 1 ಗಂಟೆ ಆಸುಪಾಸಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವುದು ತಿಳಿದು ಬಂದಿದೆ.
ಆರೋಗ್ಯ ಸ್ಥಿತಿ ಬಗ್ಗೆ ರತನ್ ಟಾಟಾ ಅವರೇ ಖುದ್ದಾಗಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದು ‘ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿರುವುದು ನನಗೆ ಗೊತ್ತಾಗಿದೆ. ಇದು ತಪ್ಪು ಮಾಹಿತಿ ಎಂದು ಹೇಳಬಯಸುತ್ತೇನೆ. ನನ್ನ ವಯೋಸಹಜ ವೈದ್ಯಕೀಯ ಸಮಸ್ಯೆಗಳ ಕಾರಣಕ್ಕೆ ಮೆಡಿಕಲ್ ಚೆಕಪ್ ಮಾಡಿಸುತ್ತಿದ್ದೇನೆ. ಆತಂಕ ಪಡುವಂಥದ್ದು ಏನೂ ಇಲ್ಲ. ಆರೋಗ್ಯವಾಗಿದ್ದೇನೆ. ಸುಳ್ಳು ಮಾಹಿತಿ ಹರಡದಂತೆ ಎಚ್ಚರವಹಿಸಬೇಕೆಂದು ಮಾಧ್ಯಮ ಹಾಗೂ ಜನರಿಗೆ ಕೋರುತ್ತೇನೆ,’ ಎಂದು ರತನ್ ಟಾಟಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
86 ವರ್ಷದ ರತನ್ ಟಾಟಾ ಭಾರತದ ಅತ್ಯಂತ ಹಿರಿಯ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಜೆಆರ್ಡಿ ಟಾಟಾ ಅವರ ಮಗನಾದ ರತನ್ ಟಾಟಾ 1991ರಿಂದ 2012ರವರೆಗೂ ಟಾಟಾ ಗ್ರೂಪ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
View this post on Instagram
