Home ಸುದ್ದಿಗಳು ಸುಡಾನ್‌ ಮಾರುಕಟ್ಟೆಯಲ್ಲಿ ಆರ್ ಎಸ್ಎಫ್ ನಿಂದ ಶೆಲ್ ದಾಳಿ: 21 ಮಂದಿ ಸಾವು

ಸುಡಾನ್‌ ಮಾರುಕಟ್ಟೆಯಲ್ಲಿ ಆರ್ ಎಸ್ಎಫ್ ನಿಂದ ಶೆಲ್ ದಾಳಿ: 21 ಮಂದಿ ಸಾವು

0
ಸುಡಾನ್‌ ಮಾರುಕಟ್ಟೆಯಲ್ಲಿ ಆರ್ ಎಸ್ಎಫ್ ನಿಂದ ಶೆಲ್ ದಾಳಿ: 21 ಮಂದಿ ಸಾವು

ಖರ್ಟೋಮ್: ಸೆನ್ನಾರ್ ನಗರದ ಜನನಿಬಿಡ ಮಾರುಕಟ್ಟೆಯಲ್ಲಿ ರಾಪಿಡ್ ಸಪೋರ್ಟ್ ಫೋರ್ಸ್  ಶೆಲ್ ದಾಳಿ  ನಡೆಸಿದ ಘಟನೆ ಸುಡಾನ್‌ನಲ್ಲಿ ನಡೆದಿದೆ.

ಈ ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 150 ಮೀರುವ ಸಾಧ್ಯತೆಯಿದೆ.

ಶೆಲ್ ದಾಳಿಯು ನಗರದ ಮುಖ್ಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಮಾಡಿದ್ದು ಇದನ್ನು ನಾಗರಿಕರ ‘ಹತ್ಯಾಕಾಂಡ’ ಎಂದು ಸುಡಾನೀಸ್ ಡಾಕ್ಟರ್ಸ್ ನೆಟ್‌ವರ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತರಕಾರಿ, ಮೀನು ಮಾರುಕಟ್ಟೆಗಳು, ಸಾರ್ವಜನಿಕ ಸಾರಿಗೆ ನಿಲ್ದಾಣ ಮತ್ತು ವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿಯಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.

ಜೂನ್ ನಲ್ಲಿ ಆರ್‌ಎಸ್‌ಎಫ್ ಸೆನ್ನಾರ್ ರಾಜ್ಯದ ರಾಜಧಾನಿಯಾಗಿರುವ ಸಿಂಗಾವನ್ನು ವಶಪಡಿಸಿಕೊಂಡಿತು. ಹಾಗೂ ಸೆನ್ನಾರ್ ನಗರದ ನಿಯಂತ್ರಣಕ್ಕಾಗಿ ಸೈನ್ಯದೊಂದಿಗೆ ಹೋರಾಡುತ್ತಿದ್ದು ಅದರಲ್ಲಿ ಸಫಲರಾಗಿದ್ದಾರೆ.

 

LEAVE A REPLY

Please enter your comment!
Please enter your name here