Home ಸುದ್ದಿಗಳು ಜಪಾನ್‌ನ ಮುಂದಿನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

ಜಪಾನ್‌ನ ಮುಂದಿನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

0
ಜಪಾನ್‌ನ ಮುಂದಿನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

ಜಪಾನ್‌: ಜಪಾನ್‌ನ ಮುಂದಿನ ಪ್ರಧಾನಿಯಾಗಿ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಅವರು ಆಯ್ಕೆಯಾಗಿದ್ದಾರೆ.

ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗೆರು ಗೆಲುವು ಸಾಧಿಸಿದ್ದಾರೆ.

ಜಪಾನ್‌ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸುತ್ತಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರನ್ನು ಸೋಲಿಸಿದರು. ಇಶಿಬಾ ಒಟ್ಟು 215 ಮತಗಳನ್ನು ಪಡೆದರೆ, ತಕೈಚಿ 194 ಮತಗಳನ್ನು ಗಳಿಸಿದ್ದಾರೆ.

ನಾನು ಜನರನ್ನು ನಂಬುತ್ತೇನೆ, ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ಸತ್ಯವನ್ನು ಮಾತನಾಡುತ್ತೇನೆ, ಮತ್ತು ಈ ದೇಶವನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಇಶಿಬಾ ಹೇಳಿದ್ದಾರೆ.

ಅಕ್ಟೋಬರ್ 1 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here