Home ಸುದ್ದಿಗಳು ಮಂಗಳೂರು ಜಂಕ್ಷನ್- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಮಂಗಳೂರು ಜಂಕ್ಷನ್- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

0
ಮಂಗಳೂರು ಜಂಕ್ಷನ್- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಮಂಗಳೂರು: ಹಬ್ಬಗಳು ಪ್ರಾರಂಭವಾಗಿದ್ದು ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಮಂಗಳೂರು ಜಂಕ್ಷನ್- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

ನಂ.06157 ಕೊಚ್ಚುವೇಲಿ – ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.14ರಂದು ರಾತ್ರಿ 9.258 ಕೊಚ್ಚುವೇಲಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ನಂ.06158 ಮಂಗಳೂರು ಜಂಕ್ಷನ್ – ಕೊಚ್ಚುವೇಲಿ ವಿಶೇಷ ರೈಲು ಅ.15ರಂದು ರಾತ್ರಿ 8.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8 ಗಂಟೆಗೆ ಕೊಚ್ಚುವೇಲಿ ತಲುಪಲಿದೆ.

ಈ ರೈಲಿಗಳು 14 ದ್ವಿತೀಯ ದರ್ಜೆ ಬೋಗಿಗಳು, 1 – ಜನರೇಟರ್ ಕಾರ್, 1 ಸೆಕೆಂಡ್ ಕ್ಲಾಸ್ ಲಗೇಜ್/ಬ್ರೇಕ್ ವ್ಯಾನ್ ಹೊಂದಿದೆ.

ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ತಿರೂರ್, ಶೋರ್ನೂರು ಜಂಕ್ಷನ್, ಎರ್ನಾಕುಳಂ ಜಂಕ್ಷನ್, ಅಲಪ್ಪುಳ, ಕಾಯಂಕುಳಂ ಜಂಕ್ಷನ್, ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆಯಾಗಲಿದೆ.

 

LEAVE A REPLY

Please enter your comment!
Please enter your name here