ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರತಿಯೊಬ್ಬರ ಜೀವನದಲ್ಲಿ ಅತೀ ಮುಖ್ಯ ಶೈಕ್ಷಣಿಕ ಘಟ್ಟ ಎಂದು ಹೇಳಬಹುದು. ಉದ್ಯೋಗ , ಉನ್ನತ, ಶೈಕ್ಷಣಿಕ ಸಹಾಯಧನ ಇನ್ನಿತರ ಶಿಕ್ಷಣ ಸೌಲಭ್ಯ ಪಡೆಯಲು ಇಲ್ಲಿನ ಅಂಕವನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಇಂದು ಈ ಪರೀಕ್ಷೆಗೆ ವಿದ್ಯಾರ್ಥಿಗಳ ಸತತ ಪ್ರಯತ್ನಕ್ಕೆ ಪೋಷಕರು ಸಹ ಬದ್ಧರಾಗುತ್ತಿದ್ದಾರೆ. ಅದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫೇಲ್ ಆಗಿ ಆತ್ಮಹತ್ಯೆ ಮಾಡಿಕೊಂಡವರು ಇದ್ದಾರೆ. ಇದನ್ನು ಅರಿತ ಸರ್ಕಾರವು ಪರೀಕ್ಷೆ ಪರಿಕಲ್ಪನೆ ಮಕ್ಕಳಿಗೆ ಸುಲಭ ಆಗಲು ಯಾವೆಲ್ಲ ಕ್ರಮ ಅನುಸರಿಸಬಹುದೆಂದು ತಿಳಿಯಲು ಮುಂದಾಗಿದೆ.
ಈ ನಡುವೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಮೂರು ಪ್ರಯತ್ನಗಳಲ್ಲಿ ನಡೆಸಲು ತೀರ್ಮಾನಿಸಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಮತ್ತು ಅನೇಕ ಶಿಕ್ಷಣ ಸಂಸ್ಥೆಗಳಿಗೆ ಉಂಟಾದ ಗೊಂದಲ ನಿವಾರಿಸಲು ಸರ್ಕಾರ ಮುಂದಾಗಿದ್ದು, ಈ ಮೂರು ಪರೀಕ್ಷಾ ಕ್ರಮದ ಬಗ್ಗೆ ಸ್ವತಃ ಶಿಕ್ಷಣ ಸಚಿವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಒಂದು ಶೈಕ್ಷಣಿಕ ಕಾರ್ಯಾಗಾರವನ್ನು ಉದ್ದೇಶಿಸಿ ಮಾತಾಡಿದ್ದು, ಈ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.
ಮೂರು ಬಾರಿ ಫೀಸ್ ಕಟ್ಬೇಕಾ?
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಣಯವಾದ ಮೂರು ಭಾರಿ ಪರೀಕ್ಷೆ ನಡೆಸುವ ಕ್ರಮ ಮಕ್ಕಳಿಗೆ ಮರಳಿ ಪ್ರಯತ್ನ ನೀಡಿದ್ದು ಉತ್ತಮ ಎನಿಸಿದ್ದರು ಪರೀಕ್ಷೆ ಫೀಸ್ ಮೂರು ಬಾರಿ ಬರಿಸಬೇಕಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರು ಒಂದು ಬಾರಿ ಶುಲ್ಕ ಕಟ್ಟಿದರೆ ಸಾಕು ಮೂರು ಪರೀಕ್ಷೆ ಬರೆಯಬಹುದು ಎಂದು ಜನರಿಗೆ ಉಂಟಾದ ಗೊಂದಲಕ್ಕೆ ವಿರಾಮವಿಟ್ಟಿದ್ದಾರೆ.
ಉದ್ದೇಶ ಇದೆ
ಮಕ್ಕಳು ಯಾವ ಮಾಧ್ಯಮದಲ್ಲಿ ಓದಿದ್ದರೂ ಕೂಡ ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು. ಮುಂಬರುವ ವರ್ಷಕ್ಕೆ 600 KPS ಶಾಲೆ ತೆರೆಯಲು ತೀರ್ಮಾನಿಸಲಾಗಿದೆ. 43ಸಾವಿರ ಶಿಕ್ಷಕರ ನೇಮಕ ಮಾಡಲಾಗುವುದು, 13 ಸಾವಿರ ಖಾಯಂ ಶಿಕ್ಷಕರ ನೇಮಕ ಮಾಡಲಾಗುವುದು. ಈ ಎಲ್ಲ ಕಾರ್ಯ ಶೀಘ್ರ ಆಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದರು.
ಶಿಕ್ಷಣ ಮಂಡಳಿಯೂ ಮಕ್ಕಳಿಗೆ ಮರು ಅವಕಾಶ ನೀಡಬೇಕು ಎಂಬ ಮಹತ್ವದ ಉದ್ದೇಶ ಹೊಂದಿದ್ದು, ಪರೀಕ್ಷಾ ಶುಲ್ಕ ಭಯ ಬೇಡ ಒಂದು ಭಾರಿ ಪರೀಕ್ಷಾ ಶುಲ್ಕ ಬರಿಸಿ ಮೂರು ಅವಕಾಶದ ಮೂಲಕ ಪರೀಕ್ಷೆ ಬರೆಯಬಹುದು. ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮುಂದೆ ಪರೀಕ್ಷೆ ಬೇಕು ಅಥವಾ ಬೇಡ ಎಂಬುದು ಅವರ ವೈಯಕ್ತಿಕ ವಿಚಾರವಾಗಿದೆ. ಮೂರು ಬಾರಿ ಪರೀಕ್ಷೆ ನಡೆಯುವ ಕಾರಣ ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದೆಯೋ ಅದೇ ಅಂಕ ಅವರಿಗೆ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
