ಬೆಂಗಳೂರು: ಇತ್ತೀಚೆಗೆ ಸರ್ಕಾರವು ಹೊರಡಿಸಿರುವ ಸುತ್ತೋಲೆಯಿಂದ ಗ್ರಹ ಜ್ಯೋತಿಯ ಬಗ್ಗೆ ಅನೇಕ ಗೊಂದಲಗಳು ಸೃಷ್ಟಿಯಾಗಿತ್ತು. ಅದರಲ್ಲೂ ಇದು ಕೇವಲ ಕೆಲವರು ಶ್ರೀಮಂತರಿಗೆ ಮಾತ್ರ ದೊರಕುತ್ತದೆ ಎಂದು ಹೇಳುತ್ತಿದ್ದರು. ಗೃಹಜೋತಿಯ ಸುತ್ತೋಲೆಯಲ್ಲಿ ಒಬ್ಬ ವ್ಯಕ್ತಿ ಹೆಸರಲ್ಲಿ ಎಷ್ಟೇ ಮೀಟರ್ ಅಳವಡಿಸಿದ್ದರು ಕೇವಲ ಒಂದು ಮೀಟರ್ ಗೆ ಮಾತ್ರ ಗೃಹಜ್ಯೋತಿ ಅನ್ವಯ ಆಗುತ್ತದೆ ಎಂದು ಹೇಳಲಾಗಿತ್ತು. ಇದರಿಂದ ಬಾಡಿಗೆದಾರರು ವಂಚಿತರಾಗುತ್ತಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಇದು ಬಾಡಿಗೆದಾರರಿಗೆ ಹೊರೆಯಾಗಿ ಮಾರ್ಪಾಡಾಗುತ್ತದೆ ಎನ್ನಲಾಗಿತ್ತು.
ಇದನ್ನೆಲ್ಲಾ ಗಮನಿಸಿದ ಸಿಎಂ ಸಿದ್ದರಾಮಯ್ಯ ಅವರು ಇದು ಕೇವಲ ಸುಳ್ಳು ಸುದ್ದಿ ಅಷ್ಟೇ, ಈ ಗೃಹಜ್ಯೋತಿ ಯೋಜನೆ ಪ್ರತಿಯೊಬ್ಬರಿಗೂ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ನಾವು ಕೇಳಿರುವ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದರೆ ಬಾಡಿಗೆದಾರರಿಗೂ ಸಹ ಗೃಹಜ್ಯೋತಿ ಯೋಜನೆ ಜಾರಿಯಾಗುತ್ತದೆ. ಇದರಿಂದ ಯಾರಿಗೂ ಕೂಡ ಅನ್ಯಾಯವಾಗುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ತಿಳಿಸಿದ್ದಾರೆ.
