Home ಕರಾವಳಿ ಪ್ರೇಮ ವೈಫಲ್ಯ: ಡೆತ್‌ ನೋಟ್‌ ಬರೆದಿಟ್ಟು ಯುವಕ ನೇಣಿಗೆ ಶರಣು

ಪ್ರೇಮ ವೈಫಲ್ಯ: ಡೆತ್‌ ನೋಟ್‌ ಬರೆದಿಟ್ಟು ಯುವಕ ನೇಣಿಗೆ ಶರಣು

ಬಂಟ್ವಾಳ: ಪ್ರೇಮ ವೈಫಲ್ಯ ಹಿನ್ನೆಲೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನುಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್(‌24) ಎಂದು ಗುರುತಿಸಲಾಗಿದೆ.

ಇಲೆಕ್ಟ್ರಿಕಲ್‌ ಕಂಪೆನಿಯೊಂದರಲ್ಲಿ ಇಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಸಚಿನ್‌, ಬುಧವಾರ ಕೆಲಸಕ್ಕೆಂದು ಹೋದವನು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದಾರೆ. ಫೋನ್‌ ಮಾಡಿದಾಗ ಫೋನ್‌ ರಿಂಗ್‌ ಆದರೂ ಆತ ರಿಸಿವ್‌ ಮಾಡದೇ ಇದ್ದಾಗ ಗಾಬರಿಗೊಂಡ ಮನೆಯವರು ಸಂಬಂಧಿಕರ ಮನೆಯಲ್ಲಿಯೂ ಕೂಡ ವಿಚಾರಿಸಿದ್ದಾರೆ. ಬಳಿಕ ಇನ್ನಷ್ಟು ಹುಡುಕಾಟ ನಡೆಸಿದಾಗ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿನ ಮೈದಾನವೊಂದರಲ್ಲಿ ಆತನ ಸ್ಕೂಟರ್‌ ನಿಲ್ಲಿಸಿರುವುದು ಪತ್ತೆಯಾಗಿದ್ದು, ಸಚಿನ್‌ ಅಲ್ಲಿ ಕಾಣದ ಹಿನ್ನೆಲೆ ಫೋನ್‌ ಮಾಡಿದಾಗ ಸಮೀಪದ ಗುಡ್ಡವೊಂದರಲ್ಲಿ ಫೋನ್‌ ರಿಂಗ್‌ ಆಗಿರುವುದು ಕೇಳುತ್ತಿದ್ದ ಹಿನ್ನೆಲೆ ಹೋಗಿ ನೋಡಿದಾಗ ಆತ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಗಮನಕ್ಕೆ ಬಂದಿದೆ.

ಇನ್ನು, ಈತ ಡೆತ್‌ ನೋಟ್‌ ಬರೆದು ಕಿಸೆಯಲ್ಲಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಅದರಲ್ಲಿ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿದೆ ಎನ್ನಲಾಗಿದೆ. ಡೆತ್‌ ನೋಟ್‌ ಈಗ ಪೊಲೀಸರ ವಶದಲ್ಲಿದ್ದು, ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 
Previous articleರಜಾ ಹಿನ್ನೆಲೆ ಬೀಚ್‌ಗೆ ತೆರಳಿದ್ದ ಬಾಲಕಿ ನೀರುಪಾಲು
Next articleಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯಧನ: ಮದುವೆ ಸಂದರ್ಭ ಸಿಗಲಿದೆ ಆರ್ಥಿಕ ನೆರವು