ಬೆಂಗಳೂರು:ಈ ಬಾರಿ ಎಲೆಕ್ಷನ್ ನಡೆಯುವ ಸಂದರ್ಭ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಹೊರಡಿಸಿ ಅದರಲ್ಲಿ 5ಗ್ಯಾರಂಟಿಗಳ ಕುರಿತು ಉಲ್ಲೇಖಿಸಿತ್ತು. ಅದರಂತೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತಾವು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಿರತವಾಗಿದ್ದು, ಆ ಪ್ರಕಾರವಾಗಿ ಈಗಾಗಲೇ ನಾಲ್ಕು ಗ್ಯಾರಂಟಿಗಳಿಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಎಲ್ಲಾ ಗ್ಯಾರಂಟಿಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಇದರನ್ವಯ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಸರ್ಕಾರ ಕಲ್ಪಸಿಕೊಟ್ಟಿದೆ. ಆದರೆ ಈ ಯೋಜನೆ ವಿರುದ್ಧ ಇದೀಗ ಖಾಸಗಿ ಬಸ್ ಮಾಲೀಕರು ಕಿಡಿಕಾರಿದ್ದಾರೆ.
ಹೌದು, ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸಿಗೆ ಬರುವ ಜನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ನಾವು ನಿರುದ್ಯೋಗಿಗಳಾಗುತ್ತೇವೆ. ಶಕ್ತಿ ಯೋಜನೆ ಹೆಸರಲ್ಲಿ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಹೀಗಾಗಿ ಸರ್ಕಾರ ನಮ್ಮ ಬಗೆಯು ಸ್ವಲ್ಪ ಯೋಚಿಸಿ ನಿಮ್ಮ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ನವರಿಗೂ ಅನ್ವಯಿಸುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಲ್ಲದಿದ್ದರೆ ನಮ್ಮ ಕುಟುಂಬಕ್ಕೆ ತುಂಬಾ ಕಷ್ಟವಾಗುತ್ತದೆ. ಇದನ್ನು ನಂಬಿಕೊಂಡು ಹಲವಾರು ಕುಟುಂಬಗಳು ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
