Home ಕರ್ನಾಟಕ ಸಂಬಳ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ: ಸಿಎಂ ಭೇಟಿಗೆ ಮನವಿ

ಸಂಬಳ ಹೆಚ್ಚಳಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ: ಸಿಎಂ ಭೇಟಿಗೆ ಮನವಿ

ಬೆಂಗಳೂರು:ಈಗಷ್ಟೇ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಏರಿರುವ ಕಾಂಗ್ರೆಸ್‌ ಸರ್ಕಾರ ತಾವು ನೀಡಿರುವ 5ಗ್ಯಾರಂಟಿಗಳ ಈಡೇರಿಕೆಯಲ್ಲಿ ತೊಡಗಿಕೊಂಡಿದೆ. ಈ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಜನರಲ್ಲಿ ಉಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿರುವ ಸರ್ಕಾರಕ್ಕೆ ಇದೀಗ ಮತ್ತೊಂದು ತಲೆನೋವು ಎದುರಾಗಿದೆ.
ಹೌದು, ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ 5ಗ್ಯಾರಂಟಿಗಳ ಜೊತೆಗೆ ಇನ್ನು ಕೆಲವು ಭರವಸೆಗಳನ್ನು ನೀಡಿದ್ದವು. ಅವುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಕೂಡ ಒಂದಾಗಿದೆ. ಹೀಗಾಗಿ ಇದೀಗ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗೌರವಧನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ನಾವು ಸಿಎಂ ಭೇಟಿ ಮಾಡಲಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕು.

 
Previous articleಜಲಾವೃತಗೊಂಡ ರಷ್ಯಾ ಆಕ್ರಮಿತ ಉಕ್ರೇನ್‌ ನಗರ: ರಷ್ಯಾ ವಿರುದ್ಧ ಉಕ್ರೇನ್‌ ಆರೋಪ
Next articleಶಕ್ತಿ ಯೋಜನೆ ವಿರುದ್ಧ ಖಾಸಗಿ ಬಸ್‌ ಮಾಲೀಕರ ಅಪಸ್ವರ