ಬೆಂಗಳೂರು: ಇತ್ತೀಚೆಗಷ್ಟೇ ಹಾಲು ಉತ್ಪಾದಕರಿಗೆ ಹಾಲಿನ ಶೇಖರಣೆ ದರವನ್ನು ಲೀಟರ್ ಗೆ ಒಂದುವರೆ ರೂಪಾಯಿಯನ್ನು ಕಡಿಮೆ ಮಾಡಿ ಕೆಎಂಎಫ್ ಹೊರಡಿಸಿರುವ ಆದೇಶವನ್ನು ಇದೀಗ ಸರ್ಕಾರ ಹಿಂಪಡೆದುಕೊಂಡಿದೆ. ಕನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ನಿದೇಶನವನ್ನು ನೀಡಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಅವರು ಮುಖ್ಯಮಂತ್ರಿಗಳ ನಿರ್ದೇಶನದಂತೆ, ಹೈನುಗಾರ ರೈತರ ಹಿತದೃಷ್ಟಿಯಿಂದ ಇಂದಿನಿಂದ ಪ್ರತಿ ಲೀಟರ್ ಗೆ ಹಿಂದಿನ ದರದಂತೆ ೩೪ ರೂ.ಗಳನ್ನು ನೀಡುವಂತೆ ಸೂಚಿಸಿದ್ದಾರೆ.
====
