Home ಸುದ್ದಿಗಳು ರಾಜ್ಯ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಯುವತಿ: ಹೃದಯಾಘಾತದಿಂದ ಸಾವು

ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಯುವತಿ: ಹೃದಯಾಘಾತದಿಂದ ಸಾವು

0
ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಯುವತಿ: ಹೃದಯಾಘಾತದಿಂದ ಸಾವು

ಭೋಪಾಲ್: ಮಧ್ಯಪ್ರದೇಶದ ವಿದಿಶಾದಲ್ಲಿ ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಮೃತಪಟ್ಟ ಯುವತಿಯೊಬ್ಬಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೃತಪಟ್ಟ ಯುವತಿ ಪರಿಣಿತಾ ಜೈನ್ ಗೆ ಕೇವಲ 23 ವರ್ಷ ವಯಸ್ಸಾಗಿತ್ತು. ತನ್ನ ಅಕ್ಕನ ಮದುವೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಲಿರುವಾಗ ವೇದಿಕೆಯ ಮೇಲೆ ನೋಡನೋಡುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಯುವತಿಯ ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿದುಬಂದಿದೆ.

ಪರಿಣಿತಾ ಜೈನ್ ಇಂದೋರ್ ನಿವಾಸಿಯಾಗಿದ್ದು, ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು ಮತ್ತು ಆಕೆಯ ಸಹೋದರಿಯ ಮದುವೆಗಾಗಿ ವಿದಿಶಾಗೆ ಆಗಮಿಸಿದ್ದರು ಎನ್ನಲಾಗಿದೆ.

https://x.com/i/status/1888794604188938716

ಯುವತಿ ವೇದಿಕೆ ಮೇಲೆ ಕುಸಿಯುತ್ತಿದ್ದಂತೆಯೇ ಅಲ್ಲಿದ್ದ ಸಂಬಂಧಿಕರು ಆಕೆಗೆ ಸಿಪಿಆರ್ ನೀಡಿದ್ದು, ಆಗಲೂ ಆಕೆ ಎಚ್ಚರಗೊಳ್ಳದ ಕಾರಣ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯು ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಪರಿಣಿತಾ ಅವರ 12 ವರ್ಷ ಸಹೋದರ ಕೂಡ ಈ ಹಿಂದೆ ಇದೇ ರೀತಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

 

LEAVE A REPLY

Please enter your comment!
Please enter your name here