ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಜೋರಾಗಿದೆ. ಅದರಲ್ಲೂ ಚಿಕ್ಕಮಗಳೂರು ಭಾಗದಲ್ಲಿ ಪದೇ ಪದೆ ಆನೆಗಳು ಕಾಣಸಿಗುತ್ತವೆ. ಸದ್ಯ ಆನೆಗಳ ಜನತೆಗೆ ಕಾಡು ಕೋಣಗಳ ದಂಡು ಪ್ರತ್ಯಕ್ಷವಾಗುತ್ತಿದೆ. ಇಲ್ಲಿನ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಡುಕೋಣಗಳು ಹಿಂಡು ಹಿಂಡಾಗಿ ಕೃಷಿ ತೋಟಗಳಿಗೆ ಲಗ್ಗೆ ಇಟ್ಟು ರೈತರ ಅಡಿಕೆ ತೋಟ, ಕಾಫಿ ಗಿಡಗಳು ಕಾಡು ಕೋಣಗಳಿಗೆ ಆಹಾರವಾಗುತ್ತಿವೆ. ಕಾಡು ಕೋಣಗಳ ಹಿಂಡೊಂದು ಚಿಕ್ಕಮಗಳೂರು ತಾಲೂಕಿನ ಬೆಟ್ಟದ ಮರಡಿ ಗ್ರಾಮದಲ್ಲಿ ಕಂಡುಬಂದಿದ್ದು, ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ರಾಜಾರೋಷವಾಗಿ ನಿಂತಿರುವ ಕಾಡುಕೋಣಗಳ ಹಿಂಡು
ಇಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಕಾಡುಕೋಣಗಳು ಕಂಡುಬಂದಿದ್ದು, ಜನರಿಗೆ ಸಂಚಾರ ಮಾಡಲು ಭಯ ನಿರ್ಮಾಣವಾಗಿದೆ. ಕಾಡಂಚಿನಿಂದ ಹಗಲು ರಾತ್ರಿ ಎನ್ನದೇ ಕಾಡಾನೆಗಳು ರಾಜಾರೋಷ ವಾಗಿ ಜನವಸತಿ ತಿರುಗಾಡುವ ಪ್ರದೇಶದಲ್ಲಿ ಕಂಡು ಬರುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
