2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, 16ನೇ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ.
4,09,549 ಕೋಟಿ ರೂ. ಗಾತ್ರದ ಬಜೆಟ್:
- 2025-26 ಸಾಲಿನಲ್ಲಿ ಪಂಚ ಗ್ಯಾರಂಟಿಗೆ 51,034 ಕೋಟಿ ರೂ. ಅನುದಾನ
- ಬಂಡವಾಳ ವೆಚ್ಚ 26,474 ಕೋಟಿ ರೂ.
- ರಾಜಸ್ವ ವೆಚ್ಚ ಅಂದಾಜು 3,11,739 ಕೋಟಿ ರೂ.
- 19,262 ಕೋಟಿ ರೂ. ರಾಜಸ್ವ ಕೊರತೆಯ ಬಜೆಟ್ ಮಂಡನೆ
- 1,16,000 ಕೋಟಿ ರೂ. ಸಾಲದ ಮೊರೆ
- ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು 2,92,477 ಕೋಟಿ ರೂ.
- ಈ ಪೈಕಿ 2,08,100 ಕೋಟಿ ಸ್ವಂತ ತೆರಿಗೆ ಸಂಗ್ರಹದ ಗುರಿ
ಇಲಾಖಾವಾರು ಅನುದಾನ:
- ಶಿಕ್ಷಣ ಇಲಾಖೆ 45, 286 ಕೋಟಿ
- ಇಂಧನ 26, 896 ಕೋಟಿ
- ನೀರಾವರಿ 22,181 ಕೋಟಿ
- ಆರೋಗ್ಯ17, 473 ಕೋಟಿ
- ಕಂದಾಯ 17, 201 ಕೋಟಿ
- ಸಮಾಜ ಕಲ್ಯಾಣ 16, 955 ಕೋಟಿ
ಯಾರ್ಯಾರಿಗೆ ಎಷ್ಟೆಷ್ಟು ಅನುದಾನ?
- ಎಸ್ಸಿ, ಎಸ್ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು. ಎಸ್ಸಿಪಿ ಟಿಎಸ್ಪಿ ಯೋಜನೆಗೆ 42018 ಕೋಟಿ ರೂ. ಮೀಸಲು.
- ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ಗೆ 200 ರೂಪಾಯಿ ನಿಗದಿ.
- ಜೈನ, ಬೌದ್ಧ, ಸಿಖ್ಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ ರೂ.
- ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸಲು ಕಟ್ಟಡ ರಾಜ್ಯದ 31 ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೂ ವಸತಿ ಶಾಲೆಗಳ ಪ್ರಾರಂಭಕ್ಕೆ 750 ಕೋಟಿ ರೂ. ನಿಗದಿ.
- ತೊಗರಿ ಬೆಳೆಗಾರರಿಗೆ 450 ರೂ. ಪ್ರೋತ್ಸಾಹಧನ.
- ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆ, ಮೂಲಸೌಕರ್ಯಕ್ಕಾಗಿ 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂ., ಸಹಾಯಕಿಯರಿಗೆ 750 ರೂ. ಗೌರವಧನ ಹೆಚ್ಚಳ ಗೃಹ ಲಕ್ಷ್ಮಿ ಯೋಜನೆಗೆ 2025-26 ಸಾಲಿನಲ್ಲಿ 28,608 ಕೋಟಿ ರೂ. ಅನುದಾನ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಒಟ್ಟು 94,084 ಕೋಟಿ ರೂ. ಅನುದಾನ ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗೆ 62,033 ಕೋಟಿ ರೂ. ಅನುದಾನ ಘೋಷಣೆ.
- ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದು, 10 ಕೋಟಿ ರೂ. ಅನುದಾನ ಘೋಷಣೆ.
- ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ನಬಾರ್ಡ್ ಸಹಯೋಗದಲ್ಲಿ ಸ್ಥಾಪನೆ. ರೇಷ್ಮೆ ಬೆಳೆ ವಿಸ್ತರಿಸಲು 55 ಕೋಟಿ ರೂ. ಅನುದಾನ.
- 2025-26 ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯ ಪ್ರಾರಂಭ.
- 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡ ನಬಾರ್ಡ್ ಸಹಯೋಗದಲ್ಲಿ ನಿರ್ಮಾಣ.
ಹೊಸ ಯೋಜನೆಗಳು:
- 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
- 1,080 ಕೋಟಿ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ
- ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂಪಾಯಿ ಮೀಸಲು
- ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ. ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ.
