Home ಸುದ್ದಿಗಳು ರಾಜ್ಯ HSRP ನಂಬರ್ ಪ್ಲೇಟ್ ಬಗ್ಗೆ ಸಾರಿಗೆ ಸಚಿವರಿಂದ ಸ್ಪಷ್ಟನೆ

HSRP ನಂಬರ್ ಪ್ಲೇಟ್ ಬಗ್ಗೆ ಸಾರಿಗೆ ಸಚಿವರಿಂದ ಸ್ಪಷ್ಟನೆ

0
HSRP ನಂಬರ್ ಪ್ಲೇಟ್ ಬಗ್ಗೆ ಸಾರಿಗೆ ಸಚಿವರಿಂದ ಸ್ಪಷ್ಟನೆ

ಹಳೆ ವಾಹನ ಚಲಾಯಿಸುವುದು ಎಂದರೆ ಅದೊಂದು ವಿಧವಾಗಿ ತೊಂದರೆ ಇದ್ದಂತೆ ಎನ್ನಬಹುದು. ಯಾಕೆಂದರೆ ಹಳೆ ವಾಹನ ಮೈಲೇಜ್ ನಿಂದ ಸುರಕ್ಷಿತ ಪ್ರಮಾಣದ ವರೆಗೆ ಎಲ್ಲವೂ ಸಹ ಹದಗೆಟ್ಟು ಹೋಗಿರುತ್ತದೆ‌‌‌. ಹಾಗಾಗಿ 2019ಕ್ಕಿಂತ ಮೊದಲು ಕರ್ನಾಟಕದಲ್ಲಿ ನೋಂದಾಯಿಸಲ್ಪಟ್ಟ ಅಷ್ಟು ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯ ಗೊಳಿಸಲಾಗಿದ್ದು ಫೆಬ್ರವರಿ17ರೊಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸೂಚಿಸಲಾಗಿತ್ತು.

ನಿಗಧಿತ ಸಮಯ ನೀಡಿದ್ದ ಕಾರಣ ಅಷ್ಟರೊಳಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡವರು ಬಹುತೇಕರಿದ್ದರೂ ಇನ್ನು ಅನೇಕರು ಕಾರಣಾಂತರಗಳಿಂದ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲಿಲ್ಲ ಹಾಗಾಗಿ ಈ ಬಗ್ಗೆ ಸರಕಾರ ಸಡಿಲ ನೀತಿ ಜಾರಿಗೆ ತರಲು ಮುಂದಾಗಿದ್ದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರ ಮೂಲಕ ವಾಹನ ಸವಾರರಿಗೆ ಶುಭ ಸುದ್ದಿಯೊಂದು ನೀಡಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಸಲು ಇರುವ ಕಾಲಮಿತಿಯನ್ನು ವಿಸ್ತರಿಸಿದ್ದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಹಾಗೆಂದರೇನು?
HSRP ನಂಬರ್ ಪ್ಲೇಟ್ ಅನ್ನುವುದು ವಾಹನಗಳ ನಂಬರ್ ಪ್ಲೇಟ್ ಮೇಲೆ ನೀಲಿ ಬಣ್ಣದ ಅಶೋಕ ಚಕ್ರ ಮುದ್ರೆಯನ್ನು ಒತ್ತಿ ಇರಲಿದೆ. ಇದು ವಾಹನಗಳ ಅತಿ ಸುರಕ್ಷತಾ ಕ್ಷಮ ಆಧಾರಿತ ನಂಬರ್ ಪ್ಲೇಟ್ ಆಗಿದ್ದು ಅಕ್ಷರಗಳೆಲ್ಲ ಉಬ್ಬು ಆಗಿರುತ್ತದೆ. ಟ್ಯಾಕ್ಟರ್, ಕಾರು, ಬೈಕ್, ಇತರ ವಾಣಿಜ್ಯ ಮತ್ತು ದೈನಿಕ ಉಪಯೋಗಿಸಲ್ಪಡುವ ವಾಹನ,ಆಟೋ, ಟಿಲ್ಲರ್ ಗಳಿಗೆಈ ನಿಯಮ ಅನ್ವಯವಾಗಲಿದೆ.

ಸಚಿವರಿಂದ ಘೋಷಣೆ
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹಳೆ ವಾಹನಗಳ ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ವಾಹನ ಕೊಂಡವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದೆ. ಹಾಗಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾದವರ ಪ್ರಮಾಣ ಕೂಡ ಅಧಿಕ ಇದೆ. ಎರಡು ಕೋಟಿಗೂ ಅಧಿಕ ವಾಹನವಿದ್ದು HSRP ನಂಬರ್ ಪ್ಲೇಟ್ ಅಳವಡಿಸಿದ್ದು ಮಾತ್ರ ಇನ್ನು ಲಕ್ಷದ ಗಡಿಯಲ್ಲೇ ಇದೆ‌. ಅದರಲ್ಲೂ ನಗರ ಪ್ರದೇಶಕ್ಕಿಂತಲೂ ಹಳ್ಳಿ ಭಾಗದಲ್ಲಿ ಈ ಬಗ್ಗೆ ಅರಿವು ಮೂಡಿಲ್ಲ ಎಂದು ಹೇಳಿದ್ದಾರೆ.

ಮೋಸ ತಡೆಯಲು ಕ್ರಮ
ಫೆಬ್ರವರಿ 17 ರ ಒಳಗೆ ಅಳವಡಿಸಲು ಸಮಯ ನೀಡಲಾಗಿತ್ತು ಆದರೆ ಇನ್ನೂ ಪೂರ್ತಿ ಪ್ರಮಾಣದಲ್ಲಿ HSRP ಅಳವಡಿಕೆ ಆಗಲಿಲ್ಲ ಹಾಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ನಂಬರ್ ಪ್ಲೇಟ್ ನೋಂದಣಿ ಮಾಡಿಕೊಳ್ಳುವ ಬದಲು ಅನ್ಯ ಮಾರ್ಗ ಹುಡುಕಲಾಗುತ್ತಿದೆ. ಅದಕ್ಕಾಗಿ ಈ ರೀತಿ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆ ಇದ್ದು ಜನರನ್ನು ಮೋಸ ಮಾಡಿಕೊಳ್ಳಲ ಮುಂದಾಗುವ ಅನೇಕ ವೆಬ್ಸೈಟ್ ಸೃಷ್ಟಿ ಆಗಿದೆ. ಅದನ್ನು ತಡೆಯುವ ಸಲುವಾಗಿ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡಿದ್ದು ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯಾವಕಾಶ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here