Home ಸುದ್ದಿಗಳು ರಾಜ್ಯ ಕುಡಿದ ಮತ್ತಿನಲ್ಲಿ ಇನ್ಮುಂದೆ ಗಾಡಿ ಚಲಾಯಿಸಿದ್ರೆ ನಿಮಗಿದೆ ಈ ಕಠಿಣ ಕ್ರಮ

ಕುಡಿದ ಮತ್ತಿನಲ್ಲಿ ಇನ್ಮುಂದೆ ಗಾಡಿ ಚಲಾಯಿಸಿದ್ರೆ ನಿಮಗಿದೆ ಈ ಕಠಿಣ ಕ್ರಮ

0
ಕುಡಿದ ಮತ್ತಿನಲ್ಲಿ ಇನ್ಮುಂದೆ ಗಾಡಿ ಚಲಾಯಿಸಿದ್ರೆ ನಿಮಗಿದೆ ಈ ಕಠಿಣ ಕ್ರಮ

ಇಂದು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಕೆಲವರು ಬೇಕಾ ಬಿಟ್ಟಿಯಾಗಿ ವಾಹನ ಚಲಾಯಿಸುತ್ತಾರೆ. ಅದರಲ್ಲೂ ಇಂದು ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿಯಮ ಗಳನ್ನು ಕೂಡ ಕಟ್ಟುನಿಟ್ಟಾಗಿ ಜಾರಿಗೆ ಮಾಡುತ್ತಿದ್ದಾರೆ. ವಾಹನ ಚಲಾಯಿಸುವ ಯಾರೇ ಆಗಿದ್ದರೂ ಕೂಡ ಟ್ರಾಫಿಕ್ ಪಾಲಿಸದೆ ಇದ್ದರೆ ಅಂತವರನ್ನು ಶಿಕ್ಷಿಸುವ ಅಥವಾ ದಂಡ ವಿಧಿಸುವ ಸಲುವಾಗಿ ಟ್ರಾಫಿಕ್ ಪೊಲೀಸ್ ತಂಡ ತೀವ್ರ ಕಾರ್ಯ ಚರಣೆ ಮಾಡುತ್ತಿದೆ.‌ ಯಾರು ನಿಯಮ ಉಲ್ಲಂಘನೆ ಮಾಡುತ್ತಾರೆ ಅವರಿಗೆ ಆನ್ ದಿ ಸ್ಪಾಟ್ ಅಲ್ಲೆ ದಂಡ ಸಹ ವಿಧಿಸುತ್ತಾರೆ. ಇದೀಗ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದರೆ ಇನ್ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

ಹೊಸ ವರ್ಷದಲ್ಲಿ ಈ ನಿಯಮ
ಇನ್ನೇನು ಹೊಸವರ್ಷ ಹಾಗೂ ಕ್ರಿಸ್ಮಸ್ ಎರಡೂ ಕೂಡ ಒಟ್ಟೊಟ್ಟಿಗೆ ಬರುವ ಕಾರಣ ಜನರ ಪ್ರಯಾಣ ದಟ್ಟಣೆ ಹೆಚ್ಚಾಗಿರುತ್ತದೆ. ಇದೇ ಸಂದರ್ಭದಲ್ಲಿ ಮದ್ಯಪಾನ ಸೇವನೆ ಮಾಡಿ ಗಾಡಿ ಚಲಾಯಿಸಿದರೆ ಡ್ರೈವ್ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತರಲು ಚಿಂತಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ್ರೆ ದಂಡ ವಿಧಿಸುದಲ್ಲದೇ ವಾಹನ ಸೀಜ್ ಮಾಡಲಾಗುತ್ತದೆ.

ಸಿಸಿಟಿವಿ ಅಳವಡಿಕೆ

ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅವರನ್ನು ಶಿಕ್ಷಿಸಲೆಂದೇ ಎಲ್ಲಾ ಸಿಗ್ನಲ್ ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವ ಟ್ರಾಫಿಕ್ ಪೊಲೀಸರು ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ವೇಗದ ಮಿತಿ ಮೀರ ಬೈಕ್‌ ಅಥವಾ ಕಾರು ಓಡಿಸಿದಲ್ಲಿ, ಟ್ರಾಫಿಕ್ ಸಿಗ್ನಲ್‌ ಬ್ರೇಕ್‌ ಮಾಡಿದಲ್ಲಿ, ಅವರ ಮೇಲೆ ಕಣ್ಣಿಡುವ ಸಿಸಿ ಕ್ಯಾಮರಾಗಳು, ಪ್ರತಿ ಕ್ಷಣದ ನಿಯಮ ಉಲ್ಲಂಘನೆಯ ಮಾಹಿತಿಯನ್ನು ಸಂಗ್ರಹಿಸುತ್ತವೆ.

ದಂಡ ವಿಧಿಸುತ್ತಾರೆ

ಅದೇ ರೀತಿ ಮೀತಿ ಮೀರಿ ಸ್ಪಿಡ್ ನಲ್ಲಿ ಪ್ರಯಾಣ ಮಾಡಿದ್ರೆ, ಹೆಲ್ಮೆಟ್ ಹಾಕದೇ, ಸೀಟ್ ಬೆಲ್ಟ್ ಹಾಕದೇ ಪ್ರಯಾಣ ಮಾಡಿದ್ರೂ ಇನ್ಮುಂದೆ ದಂಡ ವಿಧಿಸುತ್ತಾರೆ. ಹಾಗಾಗಿ ಪ್ರಯಾಣ ಮಾಡುವಾಗ ಟ್ರಾಫಿಕ್ ನ ಎಲ್ಲ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.

 

LEAVE A REPLY

Please enter your comment!
Please enter your name here