
ಶಿವಮೊಗ್ಗ: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿ ಕಂಬಳ ನಡೆದ ಬಳಿಕ ಇದೀಗ ಮಲೆನಾಡಿನ ಶಿವಮೊಗ್ಗದಲ್ಲಿಯೂ ಇದೇ ಮೊದಲ ಬಾರಿಗೆ ತುಳುನಾಡ ಕಂಬಳವನ್ನು ಆಯೋಜಿಸಲು ಸಿದ್ದತೆ ನಡೆಯುತ್ತಿದೆ.
ಶಿವಮೊಗ್ಗದ ಮಾಚೇನಹಳ್ಳಿಯ ತುಂಗಭದ್ರಾ ಜಂಕ್ಷನ್‌ನ 16 ಎಕರೆ ಪ್ರದೇಶದಲ್ಲಿ ‘ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ’ವನ್ನು ಎ. 19 ಮತ್ತು 20 ರಂದು ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ಫೆ.10 ರಂದು ಮಧ್ಯಾಹ್ನ 3:00ಗೆ ಭೂಮಿ ಪೂಜೆ ನಡೆಯಲಿದೆ.
ಕಂಬಳಕ್ಕೆ ಎಂಟರಿಂದ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮವನ್ನು ಹಬ್ಬದಂತೆ ಆಯೋಜಿಸಲಾಗುವುದು. ಕಂಬಳದ ಚಿಹ್ನೆ, ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅಧಿಕೃತವಾಗಿ ಅನಾವರಣ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಮುಚ್ಚಾರು ಕಲ್ಕುಡೆ ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.
