Home ರಾಜ್ಯ ಚಿನ್ನ ಕಳ್ಳಸಾಗಣೆ ಪ್ರಕರಣ: ತರುಣ್​ ರಾಜ್ ಬಂಧನ; ಇಬ್ಬರು ಸಚಿವರ ಕೈವಾಡದ ಶಂಕೆ

ಚಿನ್ನ ಕಳ್ಳಸಾಗಣೆ ಪ್ರಕರಣ: ತರುಣ್​ ರಾಜ್ ಬಂಧನ; ಇಬ್ಬರು ಸಚಿವರ ಕೈವಾಡದ ಶಂಕೆ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ರನ್ಯಾ ರಾವ್ ವಿಚಾರಣೆ ವೇಳೆ ಅನೇಕ ವಿಷಯಗಳನ್ನು ಬಾಯ್ಬಿಟ್ಟಿದ್ದಾರೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಡಿಆರ್​ಐ ಅಧಿಕಾರಿಗಳು ಕಳ್ಳ ಸಾಗಾಣೆ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಿದ್ದಾರೆ. ತರುಣ್​ ರಾಜ್​ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ತರುಣ್ ರಾಜ್ ಎಂಬಾತನನ್ನು ಡಿಆರ್​ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾನ್ಯಾ ರಾವ್​ ಅವರ ಕಾಲ್​ ಲಿಸ್ಟ್ ತೆಗೆದು ಕೂಡ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತರುಣ್ ರಾಜ್ ಎಂಬಾತ ನಟಿ ರನ್ಯಾ ರಾವ್ ಜೊತೆ ನಿರಂತರ ಸಂಪರ್ಕ‌ದಲ್ಲಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ರನ್ಯಾ ರಾವ್​ ಜೊತೆ ದುಬೈ ಪ್ರವಾಸಕ್ಕೆಂದು ತರುಣ್ ರಾಜ್ ಕೂಡ ಹೋಗಿದ್ದ ಎನ್ನಲಾಗುತ್ತಿದೆ. ತರುಣ್​ ರಾಜ್​ ಪ್ರಖ್ಯಾತ ಹೊಟೇಲ್ ನ ನಿರ್ದೇಶಕರೊಬ್ಬರ ಮಗ. ಡಿಆರ್ ಐ ಅಧಿಕಾರಿಗಳು ಬೆಳಗ್ಗೆ ತರುಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಸಚಿವರ ಕೈವಾಡವಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ತನಿಖೆ ತೀವ್ರವಾಗುವ ಸಾಧ್ಯತೆಗಳಿವೆ.

 

 
Previous articleರಶ್ಮಿಕಾ ರಾಜಕಾರಣ: ಕಾಂಗ್ರೆಸ್ ಶಾಸಕನ ಹೇಳಿಕೆ ಖಂಡಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ
Next articleಇಸ್ರೇಲ್ ದಾಳಿಗೆ 300ಕ್ಕೂ ಅಧಿಕ ಮಂದಿ ಸಾವು