Home ರಾಜ್ಯ ರಾಜ್ಯದ 137 ಅಕ್ರಮ ವಲಸಿಗರ ಗಡೀಪಾರಿಗೆ ಸಿದ್ದತೆ: ಡಾ. ಜಿ. ಪರಮೇಶ್ವರ

ರಾಜ್ಯದ 137 ಅಕ್ರಮ ವಲಸಿಗರ ಗಡೀಪಾರಿಗೆ ಸಿದ್ದತೆ: ಡಾ. ಜಿ. ಪರಮೇಶ್ವರ

Scheduled caste internal reservation: Request to CM to write a letter to Central Govt

ಬೆಂಗಳೂರು: ರಾಜ್ಯದಲ್ಲಿ 25 ಪಾಕಿಸ್ತಾನಿಗಳು ಸೇರಿದಂತೆ 137 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಮೂಲಕ ಅವರ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಶೀಘ್ರದಲ್ಲೇ ಆಯಾ ದೇಶಗಳಿಗೆ ಗಡಿಪಾರು ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ 84, ಬೆಂಗಳೂರು ಗ್ರಾಮಾಂತರದಲ್ಲಿ 27, ಶಿವಮೊಗ್ಗದಲ್ಲಿ 12, ಹಾಸನದಲ್ಲಿ ಮೂವರು, ಮಂಗಳೂರಿನಲ್ಲಿ ಒಬ್ಬರು ಮತ್ತು ಉಡುಪಿಯಲ್ಲಿ 10 ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ, 2016 ರಲ್ಲಿ 33 ಬಾಂಗ್ಲಾದೇಶಿಗಳನ್ನು ಪತ್ತೆಹಚ್ಚಲಾಗಿದ್ದು, ಅವರೆಲ್ಲರನ್ನೂ ಆಗ ಗಡೀಪಾರು ಮಾಡಲಾಗಿದೆ . ವಿಜಯಪುರದಲ್ಲಿ ಈಗ ಯಾವುದೇ ಅಕ್ರಮ ವಲಸಿಗರು ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಹಾಸನ, ಚಿಕ್ಕಮಗಳೂರು ಮತ್ತು ಸಕಲೇಶಪುರದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಬಾಂಗ್ಲಾದೇಶಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

 

 
Previous articleಶತಮಾನದ ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಾನದಲ್ಲಿ ನಡೆಯಿತು ಶತಚಂಡಿಕಾಯಾಗ
Next articleಮಂಗಳೂರು: ಪಿಯುಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣ; ಪತ್ತೆಗೆ ಏಳು ಪೊಲೀಸ್ ತಂಡಗಳ ರಚನೆ