Home ಸುದ್ದಿಗಳು ರಾಜ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ನಾಯಕ: ಈ ಬಾರಿಯಾದರೂ ಕಪ್ ನಮ್ದಾಗುತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ನಾಯಕ: ಈ ಬಾರಿಯಾದರೂ ಕಪ್ ನಮ್ದಾಗುತ್ತಾ?

0
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೊಸ ನಾಯಕ: ಈ ಬಾರಿಯಾದರೂ ಕಪ್ ನಮ್ದಾಗುತ್ತಾ?
Image: RCB/ X handle

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 2025 ರ ಆವೃತ್ತಿಯು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಪ್ರತಿ ದಿನವೂ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಸೀಸನ್‌ಗೆ ಮುಂಚಿತವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಿಸಿದೆ. 2024 ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಬೆಂಗಳೂರು ಮೂಲದ ಫ್ರಾಂಚೈಸಿಯು ತಂಡವನ್ನು ಮುನ್ನಡೆಸಲು ಹೊಸ ನಾಯಕನನ್ನು ಹುಡುಕುತ್ತಿತ್ತು. ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ ಮತ್ತು ಫಿಲ್ ಸಾಲ್ಟ್ ಈ ಮೂವರಲ್ಲಿ ಯಾರಾದರೊಬ್ಬರು ನಾಯಕನ ಸ್ಥಾನ ತುಂಬುವ ಬಗ್ಗೆ ಊಹಾಪೋಹಗಳಿದ್ದವು. ಇದೀಗ ಊಹಾಪೋಹಗಳಿಗೆ ತೆರೆಬಿದ್ದಿದ್ದು, ತಂಡದ ಹೊಸನಾಯಕನ ಹೆಸರನ್ನು ಘೋಷಿಸಲಾಗಿದೆ.

ರಜತ್ ಮನೋಹರ್ ಪಾಟೀದಾರ್ ಗೆ ಆರ್.ಸಿ.ಬಿ ಸಾರಥ್ಯ ವಹಿಸಲಾಗಿದೆ.

ಈ ಬಗ್ಗೆ ಪೋಸ್ಟ್ ಮಾಡಿರುವ ಫ್ರಾಂಚೈಸಿಯು ” ಬಹುಪರಾಕ್ ಹೇಳೋ ಸಮಯ ಬಂದಿದೆ, ಬೆಂಗಳೂರು!ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್” ಎಂದಿದೆ.

Image: RCB/X handle

ತಂಡಕ್ಕೆ ಹೊಸ ನಾಯಕನ ಸಾರಥ್ಯದಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಬಾರಿಯಾದರೂ ಕಪ್ ನಮ್ದಾಗುತ್ತಾ ಎಂದು ಕಾತರದಿಂದ ಕಾಯುತ್ತಿದ್ದಾರೆ.

 

 

 

 

LEAVE A REPLY

Please enter your comment!
Please enter your name here