
ಭಾಷೆ ಇಂದು ಪ್ರಮುಖ ಸಂವಹನ ಮಾಧ್ಯಮವಾಗುತ್ತಿದೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುತ್ತಾರೆ ಆದರೆ ಈ ಎರಡು ಪ್ರಕ್ರಿಯೆಗೂ ಭಾಷೆ ಇತಿ ಮಿತಿಗಳು ಇದ್ದೇ ಇರುತ್ತದೆ. ಇಂದು ದೇಶ ವಿದೇಶದಲ್ಲಿ ಮಾನ್ಯತೆ ಪಡೆಯುವ ಅದೆಷ್ಟೋ ಸೆಲೆಬ್ರಿಟಿಗಳಿಗೆ ಐದಾರು ಭಾಷೆ ಬರುತ್ತದೆ.ಅದೇ ರೀತಿ ನಾವೆಷ್ಟು ಭಾಷೆ ಕಲಿತರು ಮಾತೃ ಭಾಷೆ ಮೇಲೆ ಇರುವ ವ್ಯಾಮೋಹದ ಸಂಬಂಧ ಒಂದು ತರಹ ಬೇರೆಯೇ ರೀತಿಯದ್ದು.
ಕಡಿಮೆ ಸಂಖ್ಯೆ
ದೇಶದ ಒಳಗಡೆ ಆಯಾ ರಾಜ್ಯದ ಭಾಷೆಗಳು ಮಾತೃ ಭಾಷೆಯಾಗಿ ಬಳಕೆಯಾಗುತ್ತಿದೆ. ಶಿಕ್ಷಣದಲ್ಲಿ ಕೂಡ ಮಾತೃ ಭಾಷೆಗೆ ಪ್ರತ್ಯೇಕ ಸ್ಥಾನ ಮಾನ ಕಂಡುಕೊಳ್ಳಲಾಗುತ್ತಿದೆ. ಅದೇ ರೀತಿ ಮಾತೃ ಭಾಷೆಯಲ್ಲಿ ಇರುವ ಹಿಡಿತ ಇಂಗ್ಲಿಷ್ ನಲ್ಲಿ ಇಲ್ಲ ಅನ್ನೊ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇಂಗ್ಲಿಷ್ ಅರ್ಥ ಮಾಡಿಕೊಳ್ಳಲು ಮತ್ತು ಅರ್ಥ ಮಾಡಿಕೊಂಡಿದ್ದನ್ನು ಬರೆಯುವುದು ಕೆಲವರಿಗಂತೂ ತೀರ ಕಷ್ಟವಾಗುತ್ತಿದ್ದ ಫಾರ್ಮಸಿ, ಸೈನ್ಸ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಓದುವವರು ಕೂಡ ಕಡಿಮೆ ಆಗುತ್ತಿದ್ದಾರೆ.
ಉನ್ನತ ಶಿಕ್ಷಣ ಮಟ್ಟ ಕುಸಿತ
ನಗರ ಪ್ರದೇಶದಲ್ಲಿ ಇಂಗ್ಲಿಷ್ ಮಿಡಿಯಂ ನಲ್ಲಿ ಕಲಿತ ಮಕ್ಕಳನ್ನು ಹೊರತುಪಡಿಸಿ ಸಾಮಾನ್ಯ ಬಡವರ್ಗದವರಿಗೆ ಈ ವ್ಯವಸ್ಥೆ ಕಬ್ಬಿಣದ ಕಡಲೆಯಂತಾಗಿದೆ. ಕಷ್ಟದ ಕೋರ್ಸ್ ಗಳಿಗೆ ಲಕ್ಷಾಂತರ ಹಣ ಸುರಿದು ಜಸ್ಟ್ ಪಾಸ್ ಅಥವಾ ಫೇಲ್ ಆಗುವುದಕ್ಕಿಂತ ಸುಲಭ ಕೋರ್ಸ್ ಮಾಡುವುದು ಉತ್ತಮ ಎಂಬ ಭಾವನೆ ವಿದ್ಯಾರ್ಥಿಗಳಿಗೆ ಬರುತ್ತಿದೆ. ಹಾಗಾಗಿ ಯುಜಿಸಿಯಲ್ಲಿ ಉನ್ನತ ಶಿಕ್ಷಣ ಮಾಡುವವರ ಪ್ರಮಾಣ ತೀರ ಕಡಿಮೆ ಆಗಿದೆ ಎಂದು ಹೇಳಬಹುದು. ಉನ್ನತ ಶಿಕ್ಷಣದಲ್ಲಿ ಕುಸಿಯುತ್ತಿರುವ ಅನುಪಾತ ಸರಿದೂಗಿಸಲು ಭಾಷಾ ಅಡೆರ
ತಡೆ ನಿವಾರಿಸಲು ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಯಾವುದು ಈ ಕ್ರಮ?
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆ ನಡೆಸುವಂತಹ ನೀಟ್, ಜೆಇಇ, ಸಿಯುಇಟಿ ಇತರ ಪ್ರವೇಶ ಪರೀಕ್ಷೆಯನ್ನು ಪ್ರಾದೇಶಿಕ ಭಾಷಾವಾರು ಮಾಡಲು ನಿರ್ಧರಿಸಲಾಗುತ್ತಿದೆ. ಅಂದರೆ ಹಿಂದಿ, ಇಂಗ್ಲಿಷ್ ನಂತೆ ಒಟ್ಟು 13ಭಾಷೆಯಲ್ಲಿ ಪರೀಕ್ಷೆ ನಡೆಯಲಿದ್ದು ಆಯಾ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು.
ಇದಕ್ಕೂ ಮೊದಲು ಪರೀಕ್ಷೆ ಬರೆಯುವ ಆಸಕ್ತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಗುರುತಿಸುವ ಕಾರ್ಯ ಮಾಡಲಿವೆ. ಆ ಬಳಿಕ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಂಚಿತವಾಗಿ ಅಧ್ಯಯನ ಸಾಮಾಗ್ರಿ ಒದಗಿಸುವ ಕೆಲಸವನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಮಾಡಲಿವೆ. ಇದರಿಂದಾಗಿ ಮಾತೃ ಭಾಷೆಯಲ್ಲಿಯೇ ಮಕ್ಕಳು ತಮಗೆ ಅರ್ಥವಾದಂತೆ ಉತ್ತರ ಬರೆದು ಸುಲಭಕ್ಕೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಇಂತಹ ಕೋರ್ಸ್ ಗಳಿಗೆ ಸೇರುವ ಮಕ್ಕಳ ಪ್ರಮಾಣ ಕೂಡ ಗಣನೀಯವಾಗಿ ಏರಲಿದೆ. ಮಾತೃ ಭಾಷೆಯಲ್ಲಿ ಅಧ್ಯಯನ ಸಾಮಾಗ್ರಿ ಇರುವ ಕಾರಣಕ್ಕೆ ಸುಲಭವಾಗಿ ಮಕ್ಕಳಿಗೆ ಕೂಡ ವಿಚಾರದ ಅರಿವಾಗಲಿದೆ. ಹೀಗಾಗಿ ಯುಜಿಸಿ ಈ ನಿರ್ಣಯಕ್ಕೆ ಬರಲು ಮುಂದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
