ಬೆಂಗಳೂರು:ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎನ್ನುವ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ.ಸೂಲಿಬೆಲೆ ಅವರ ಕುರಿತು ಈ ರೀತಿ ಹೇಳಿಕೆ ಸರಿಯಾದದ್ದಲ್ಲ, ಅವರ ಈ ಹೇಳಿಕೆ ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಕುಟುಕಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಅವರು ಭಯೋತ್ಪಾದಕರಲ್ಲ. ಅವರೊಬ್ಬ ರಾಷ್ಟ್ರಭಕ್ತ. ಅವರ ಬಗ್ಗೆ ಇಂತಹ ಹೇಳಿಕೆ ಸರಿಯಾದದ್ದಲ್ಲ ಆದ್ದರಿಂದ ತಾವು ಮಾಧ್ಯಮದ ಮುಂದೆ ಹೇಳಿಕೆ ನೀಡುವಾಗ ಸ್ವಲ್ಪ ನೋಡಿಕೊಂಡು ಹೇಳಿಕೆ ನೀಡಬೇಕು ಇಲ್ಲದಿದ್ದರೆ ನಾವು ಹೇಳಿಕೆ ಕುರಿತು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
